ಮಾಡಿದ್ದು ಒಂದೇ ಓವರ್, ಆದ್ರೆ ಆಗಿದ್ದು ಮ್ಯಾಜಿಕ್! ರೋಹಿತ್ ನೀಡಿದ್ದ ಚಾಲೆಂಜ್ ಗೆ ಮೊಹಮ್ಮದ್ ಶಮಿ ಉತ್ತರ!

Webdunia
ಸೋಮವಾರ, 17 ಅಕ್ಟೋಬರ್ 2022 (13:59 IST)
ಬ್ರಿಸ್ಬೇನ್: ಬಹಳ ದಿನಗಳ ನಂತರ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿರುವ ಮೊಹಮ್ಮದ್ ಶಮಿ ಒಂದೇ ಓವರ್ ಬೌಲಿಂಗ್ ಮಾಡಿ ಭಾರತಕ್ಕೆ ಪಂದ್ಯವನ್ನೇ ಗೆಲ್ಲಿಸಿಕೊಟ್ಟರು.

ಮೊಹಮ್ಮದ್ ಶಮಿ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊನೆಯ ಓವರ್ ಮಾತ್ರ ಬೌಲಿಂಗ್ ಮಾಡಿದ್ದಾರೆ. ಈ ಓವರ್ ನಲ್ಲಿ ಶಮಿ ನೀಡಿದ್ದು 4 ರನ್ ಪಡೆದಿದ್ದು 3 ವಿಕೆಟ್. ಅದರಲ್ಲೂ ಕೊನೆಯ ಎಸೆತ ಕರಾರ್ ವಾಕ್ ಯಾರ್ಕರ್ ಗೆ ಎದುರಾಳಿ ಕ್ಲೀನ್ ಬೌಲ್ಡ್ ಆಗಿದ್ದ. ಈ ಮೂಲಕ ಶಮಿ ಅದ್ಭುತ ಕಮ್ ಬ್ಯಾಕ್ ಮಾಡಿದ್ದಾರೆ.

ಆರಂಭಿಕ ಓವರ್ ಗಳಲ್ಲಿ ಶಮಿಗೆ ಆಡುವ ಅವಕಾಶ ನೀಡಲಿಲ್ಲ. ರೋಹಿತ್ ಬೇಕೆಂದೇ ಶಮಿಗೆ ಕೊನೆಯ ಓವರ್ ನೀಡಿ ಸಾಬೀತುಪಡಿಸುವಂತೆ ಸವಾಲು ಹಾಕಿದ್ದರಂತೆ. ತಮಗೆ ಸಿಕ್ಕ ಅವಕಾಶವನ್ನು ಶಮಿ ಬಿಡಲಿಲ್ಲ. ಸಿಕ್ಕ ಒಂದೇ ಓವರ್ ನಲ್ಲಿ ಇಡೀ ಪಂದ್ಯವನ್ನೇ ಭಾರತದ ಕಡೆಗೆ ತಿರುಗಿಸಿ ತಾವೇನೆಂದು ನಿರೂಪಿಸಿಬಿಟ್ಟರು! ಅವರ ಈ ಸಾಹಸಕ್ಕೆ ನಾಯಕ ರೋಹಿತ್ ಶರ್ಮಾರಿಂದ ಶಹಬ್ಬಾಶ್ ಗಿರಿಯೂ ಸಿಕ್ಕಿತು.


-Edited by Rajesh Patil

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB VS PBKS: ಟಾಸ್‌ ಗೆದ್ದ ಪಂಜಾಬ್‌, ಬೌಲಿಂಗ್ ಆಯ್ಕೆ

ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡಿದಳು: ಪತ್ನಿ ಅನುಷ್ಕಾ ತಂದ ಬದಲಾವಣೆ ಬಗ್ಗೆ ವಿರಾಟ್ ಕೊಹ್ಲಿ ಮಾತು

IPL 2026: ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ ಇಂದು ಮಹತ್ವದ ಪಂದ್ಯ: ಗೆದ್ದರೆ ಪ್ಲೇಆಫ್‌ ಸ್ಥಾನ ಫಿಕ್ಸ್‌

ಈ ದಿನ ಹಸೆಮಣೆ ಏರಲಿದ್ದಾರಂತೆ ಹಾರ್ದಿಕ್ ಪಾಂಡ್ಯ, ಮಹಿಕಾ, ಇಲ್ಲಿದೆ ಮಾಹಿತಿ

IPL 2026: ಶುಭಮನ್‌ ಗಿಲ್‌ ಪಡೆಯ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ ಕೋಲ್ಕತ್ತಾ ನೈಟ್‌ ರೈಡರ್ಸ್‌

ಮುಂದಿನ ಸುದ್ದಿ
Show comments