Webdunia - Bharat's app for daily news and videos

Install App

ನಿವೃತ್ತಿ ಬಗ್ಗೆ ಸುಳಿವು ನೀಡಿದ ವೇಗಿ ಮೊಹಮ್ಮದ್ ಶಮಿ

Krishnaveni K
ಗುರುವಾರ, 8 ಫೆಬ್ರವರಿ 2024 (11:00 IST)
Photo Courtesy: Twitter
ಕೋಲ್ಕೊತ್ತಾ: ಗಾಯದಿಂದಾಗಿ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ನಿವೃತ್ತಿ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

33 ವರ್ಷದ ಶಮಿ ತಮ್ಮ ನಿವೃತ್ತಿ ಯಾವಾಗ ಇರಬಹುದು ಎಂದು ಸುಳಿವು ನೀಡಿದ್ದಾರೆ. ನನಗೆ ಯಾವಾಗ ಕ್ರಿಕೆಟ್ ಬೇಡ ಎಂದು ಎನಿಸುತ್ತದೆಯೋ ಆ ದಿನ ನಾನು ಹಿಂದೆ ಮುಂದೆ ಯೋಚಿಸದೇ ನಿವೃತ್ತಿ ಘೋಷಿಸುತ್ತೇನೆ. ಯಾವುದಕ್ಕೂ ನಾನು ಹೊರೆಯಾಗಲು ಬಯಸುವುದಿಲ್ಲ ಎಂದಿದ್ದಾರೆ. ಆದರೆ ಅದು ಯಾವಾಗ ಎಂದು ಹೇಳಿಲ್ಲ.

ನನಗೆ ವೃತ್ತಿ ಅಥವಾ ನಿವೃತ್ತಿ ಬಗ್ಗೆ ಚರ್ಚಿಸಲು ಕುಟುಂಬದಲ್ಲಿ ಯಾರೂ ಇಲ್ಲ. ಹೀಗಾಗಿ ನನಗೆ ಯಾವಾಗ ಮೈದಾನಕ್ಕೆ ಹೋಗಬಕು ಎಂದು ಅನಿಸಲ್ಲವೋ ಆಗ ಟ್ವೀಟ್ ಮಾಡಿ ನಿವೃತ್ತಿ ಘೋಷಿಸುತ್ತೇನೆ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ವೈರಲ್ ಆಗಿದೆ.

ಏಕದಿನ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ ಇತ್ತೀಚೆಗಿನ ದಿನಗಳಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಆದರೆ ವಿಶ್ವಕಪ್ ಬಳಿಕ ಗಾಯದಿಂದಾಗಿ ಅವರಿಗೆ ಆಡಲು ಸಾಧ‍್ಯವಾಗಿಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದರೂ ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ.

ಸಂದರ್ಶನದಲ್ಲಿ ತಮ್ಮ ಬಯೋಪಿಕ್ ನಿರ್ಮಾಣದ ಬಗ್ಗೆಯೂ ಶಮಿ ಮಾತನಾಡಿದ್ದಾರೆ. ನನ್ನ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿದೆ. ಆದರೆ ಅದನ್ನು ಯಾರು ಮಾಡುತ್ತಾರೆ ಎಂದು ಗೊತ್ತಿಲ್ಲ. ಒಂದು ವೇಳೆ ಯಾವ ನಟನೂ ಸಿಗದಿದ್ದರೆ ನಾನೇ ಆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

IND vs ENG: ಹಾರ್ಟ್ ಬ್ರೇಕ್ ನಂತರ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ

ಮುಂದಿನ ಸುದ್ದಿ
Show comments