Daily Horoscope
✕

ಲಕ್ನೋ ಸ್ಪೀಡ್ ಸ್ಟಾರ್ ಮಯಾಂಕ್ ಗೆ ಶೀಘ್ರವೇ ಟೀಂ ಇಂಡಿಯಾ ಕರೆ ಪಕ್ಕಾ

Krishnaveni K
ಬುಧವಾರ, 3 ಏಪ್ರಿಲ್ 2024 (12:15 IST)
ಬೆಂಗಳೂರು: ಈ ಬಾರಿಯ ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಅರಳಿದ ಹೊಸ ಪ್ರತಿಭೆ ಮಯಾಂಕ್ ಯಾದವ್. ಅವರ ಈಗಿನ ಪ್ರದರ್ಶನ ಗಮನಿಸುತ್ತಿದ್ದರೆ ಸದ್ಯದಲ್ಲೇ ಟೀಂ ಇಂಡಿಯಾ ಕರೆ ಪಕ್ಕಾ ಎನ್ನಲಾಗುತ್ತಿದೆ.

ಕಳೆದ ಬಾರಿ ಐಪಿಎಲ್ ನಲ್ಲಿ ಉಮ್ರಾನ್ ಮಲಿಕ್ ವೇಗದ ಎಸೆತದ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು. ಆದರೆ ಉಮ್ರಾನ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆ. ಸಿಕ್ಕರೂ ಅವರು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು.

ಇದೀಗ ಈ ಐಪಿಎಲ್ ನಲ್ಲಿ ಮಯಾಂಕ್ ಯಾದವ್ ಸತತವಾಗಿ 150 ಕಿ.ಮೀ. ವೇಗದಲ್ಲಿ ಚೆಂಡೆಸೆದು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಲಕ್ನೋಗೆ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಗೆಲುವು ಕೊಡಿಸಲು ಮಯಾಂಕ್ ವೇಗದ ಎಸೆತಗಳೇ ಕಾರಣ. ಪಂಜಾಬ್ ಮತ್ತು ಆರ್ ಸಿಬಿ ಬ್ಯಾಟಿಗರಿಗೆ ಮಯಾಂಕ್ ವೇಗದ ಎಸೆತವನ್ನು ಎದುರಿಸಲಾಗಲಿಲ್ಲ.

ವಿಶೇಷವೆಂದರೆ ವೇಗದ ಜೊತೆಗೆ ಮಯಾಂಕ್ ಗೆ ನಿಯಂತ್ರಣ ಕೂಡಾ ಸಾಧಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಸರಿಯಾದ ನಿಟ್ಟಿನಲ್ಲಿ ತಮ್ಮ ಪ್ರತಿಭೆ ಬಳಸಿಕೊಂಡರೆ ಮಯಾಂಕ್ ಮುಂದೆ ಟೀಂ ಇಂಡಿಯಾದ ಭವಿಷ್ಯದ ತಾರೆಯಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಹೆಸರಲ್ಲಿ ಸಿರಾಜ್ ಎಂದಿದೆಯಲ್ಲಾ ಅದಕ್ಕೇ ಹೊರಗಿಡಲಾಗಿದೆ: ಮೊಹಮ್ಮದ್ ಸಿರಾಜ್ ಬಗ್ಗೆ ಕಾಂಗ್ರೆಸ್ ಸಂಸದನ ವಿವಾದಿತ ಹೇಳಿಕೆ

IND vs NZ: ಔಟ್ ಇದ್ದರೂ ನಾಟೌಟ್ ತೀರ್ಪು, ಕುಮಾರ್ ಧರ್ಮಸೇನಾ ಎಡವಟ್ಟಿನಿಂದ ಎರಡೆರಡು ಬಾರಿ ಬಚಾವಾದ ಕೆಎಲ್ ರಾಹುಲ್ Video

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ನಿವೃತ್ತಿ ಬಗ್ಗೆ ಸಿಎಸ್ ಕೆಗೆ ಧೋನಿ ಹೇಗೆ ಹೇಳಿದ್ರು, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments