Publish Date: Sun, 07 May 2023 (06:30 IST)
Updated Date: Sun, 07 May 2023 (06:46 IST)
ನವದೆಹಲಿ: ಐಪಿಎಲ್ 2023 ರ ನಿನ್ನೆಯ ಡೆಲ್ಲಿ-ಬೆಂಗಳೂರು ಪಂದ್ಯದಲ್ಲಿ ವಿರಾಟ್ ಕೊಹ್ಲಿ-ಗಂಗೂಲಿ ಪರಸ್ಪರ ಹಸ್ತಾಲಾಘವ ಮಾಡುವ ಮೂಲಕ ಗಮನ ಸೆಳೆದರು.
ಟೀಂ ಇಂಡಿಯಾ ನಾಯಕತ್ವ ವಿಚಾರದಲ್ಲಿ ಇಬ್ಬರ ನಡುವೆ ಶೀತಲ ಸಮರ ನಡೆದಿತ್ತು. ಇದಕ್ಕೆ ಮೊದಲು ನಡೆದಿದ್ದ ಬೆಂಗಳೂರು-ಡೆಲ್ಲಿ ಪಂದ್ಯದ ವೇಳೆ ಕೊಹ್ಲಿ ಗಂಗೂಲಿಯತ್ತ ದಿಟ್ಟಿಸಿ ನೋಡಿದ್ದಲ್ಲದೆ, ಪಂದ್ಯದ ಬಳಿಕ ಇಬ್ಬರೂ ಹಸ್ತಾಲಾಘವ ಮಾಡದೇ ಅಸಮಾಧಾನ ಹೊರಹಾಕಿದ್ದರು.
ಆದರೆ ನಿನ್ನೆಯ ಪಂದ್ಯದಲ್ಲಿ ಇಬ್ಬರೂ ಮನಸ್ತಾಪ ಮರೆತು ಹಸ್ತಾಲಾಘವ ಮಾಡಿದ್ದಾರೆ. ಡೆಲ್ಲಿ ಪಂದ್ಯ ಗೆದ್ದ ಬಳಿಕ ಉಭಯ ಆಟಗಾರರು ಹಸ್ತಾಲಾಘವ ಮಾಡುವ ವೇಳೆ ಗಂಗೂಲಿ-ಕೊಹ್ಲಿ ಹಸ್ತಾಲಾಘವ ಮಾಡಿದ್ದಾರೆ. ಈ ವೇಳೆ ಗಂಗೂಲಿ ಕೊಹ್ಲಿಯ ಬೆನ್ನುತಟ್ಟಿ ಮುಂದೆ ಸಾಗಿದ್ದಾರೆ.