Publish Date: Tue, 15 Dec 2020 (09:38 IST)
Updated Date: Tue, 15 Dec 2020 (09:39 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಈ ವಾರಂತ್ಯ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡಲ್ಲ! ಹೀಗಂತ ಕಾಮೆಂಟೇಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ. ಅದಕ್ಕೆ ತಕ್ಕ ಕಾರಣವನ್ನೂ ನೀಡಿದ್ದಾರೆ.
ಮೊನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ರಾಹುಲ್ ಭಾಗಿಯಾಗಿಲ್ಲ. ಅಲ್ಲದೆ, ಸುದೀರ್ಘ ಮಾದರಿಯ ಪಂದ್ಯದಲ್ಲಿ ರಾಹುಲ್ ದಾಖಲೆಯೂ ಚೆನ್ನಾಗಿಲ್ಲ. ಹೀಗಾಗಿ ರಾಹುಲ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ‍್ಯತೆ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.