Publish Date: Sun, 13 Dec 2020 (09:51 IST)
Updated Date: Sun, 13 Dec 2020 (09:52 IST)
ಮುಂಬೈ: ಬೆಂಗಳೂರಿನ ಎನ್ ಸಿಎನಲ್ಲಿ ಫಿಟ್ನೆಸ್ ಪರೀಕ್ಷೆ ಪಾಸಾದರೂ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಅಗ್ನಿ ಪರೀಕ್ಷೆ ಮುಗಿದಿಲ್ಲ.
ಸೋಮವಾರ ಆಸ್ಟ್ರೇಲಿಯಾಗೆ ತೆರಳಲಿರುವ ರೋಹಿತ್ ಬಳಿಕ 14 ದಿನಗಳ ಕ್ವಾರಂಟೈನ್ ಗೊಳಗಾಗಲಿದ್ದಾರೆ. ಕ್ವಾರಂಟೈನ್ ಮುಗಿದ ಬಳಿಕ ಮತ್ತೆ ರೋಹಿತ್ ಫಿಟ್ನೆಸ್ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. ಮತ್ತೆ ಅವರ ದೈಹಿಕ ಸಾಮರ್ಥ್ಯ ಪರೀಕ್ಷಿಸಿ ಪಂದ್ಯದಲ್ಲಿ ಆಡಿಸಲಾಗುತ್ತದೆ.