Daily Horoscope
✕

ಟೀಂ ಇಂಡಿಯಾದ ದೊಡ್ಡ ಚಿಂತೆ ಮರೆಸಿದ ಕೆಎಲ್ ರಾಹುಲ್

Webdunia
ಗುರುವಾರ, 23 ಆಗಸ್ಟ್ 2018 (09:03 IST)
ಟ್ರೆಂಟ್ ಬ್ರಿಡ್ಜ್: ಟೀಂ ಇಂಡಿಯಾದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಕೆಎಲ್ ರಾಹುಲ್ ಇನ್ನೊಂದು ರೀತಿಯಲ್ಲಿ ತಂಡಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ.

ಟೀಂ ಇಂಡಿಯಾ ಫೀಲ್ಡಿಂಗ್ ಮಾಡುವಾಗ ಸ್ಲಿಪ್ ನಲ್ಲಿ ನಿಂತಿದ್ದ ಕೆಎಲ್ ಈ ಪಂದ್ಯದಲ್ಲಿ ತಂಡಕ್ಕಿದ್ದ ದೊಡ್ಡ ಚಿಂತೆ ಮರೆಸಿದ್ದಾರೆ. ಕಳೆದ ಪಂದ್ಯದಲ್ಲಿ ಹಲವು ಕ್ಯಾಚ್ ಗಳು ಕೈ ಚೆಲ್ಲಿದ್ದವು. ಆದರೆ ಈ ಪಂದ್ಯದಲ್ಲಿ ಸ್ಲಿಪ್ ಫೀಲ್ಡರ್ ಆಗಿ ರಾಹುಲ್ ಯಶಸ್ವಿಯಾಗಿ ತಮ್ಮ ಕೆಲಸ ಪೂರೈಸಿದ್ದಾರೆ.

ಇಂಗ್ಲೆಂಡ್ ನ ಎರಡೂ ಇನಿಂಗ್ಸ್ ಸೇರಿ ಸ್ಲಿಪ್ ನಲ್ಲಿ ರಾಹುಲ್ ಒಟ್ಟು 7 ಕ್ಯಾಚ್ ಪಡೆದಿದ್ದಾರೆ. ಒಂದನ್ನೂ ಕೈ ಚೆಲ್ಲಿಲ್ಲ. ಸ್ಲಿಪ್ ಫೀಲ್ಡಿಂಗ್ ಎಂದರೆ ಭಾರತ ಕ್ರಿಕೆಟ್ ಗೆ ನೆನಪಾಗುವುದು ರಾಹುಲ್ ದ್ರಾವಿಡ್ ರನ್ನು. ಟೆಸ್ಟ್ ಕ್ರಿಕೆಟ್ ನಲ್ಲಿ ದ್ರಾವಿಡ್ ಗೆ ಇದು ಖಾಯಂ ಫೀಲ್ಡಿಂಗ್ ಸ್ಥಾನ. ಇಲ್ಲಿ ದ್ರಾವಿಡ್ ಪಡೆದ ಕ್ಯಾಚ್ ಗಳ ಸಂಖ್ಯೆಯೇ ದಾಖಲೆಯಾಗಿತ್ತು. ಇದೀಗ ಅದೇ ಸ್ಥಾನದಲ್ಲಿ ಅದೇ ಹೆಸರಿನ ವ್ಯಕ್ತಿ ಯಶಸ್ವಿಯಾಗಿ ತಮ್ಮ ಕೆಲಸ ಪೂರೈಸಿದ್ದು ವಿಶೇಷವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮನೆಯಲ್ಲಿ ಟಿವಿ ನೋಡುತ್ತಲೇ ಲಾಸ್ಟ್ ಐದು ಓವರ್ ಬೌಲಿಂಗ್ ಪ್ಲ್ಯಾನ್ ಮಾಡಿದ ಸೂರ್ಯಕುಮಾರ್ ಯಾದವ್ Video

IND vs WI: ಅಯ್ಯೋ ಚೇಟಾ ಸೆಂಚುರಿ ಮಿಸ್ ಆಯ್ತಲ್ಲಾ.. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್

IND vs WI 2nd T20I: ರಾಂಚಿಯಲ್ಲಿ ರೋಚಕ ಸಮರ, ಪಂದ್ಯದ ಸಮಯ, ಟಿವಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್ ನಡುವೆ ಹೀಗೆಲ್ಲಾ ನಡೆಯುತ್ತಿತ್ತಾ.. ಹರಿದಾಡುತ್ತಿದೆ ಹೀಗೊಂದು ಸುದ್ದಿ

ಅಜಿತ್ ಅಗರ್ಕರ್ ಹೋಗಿದ್ದಕ್ಕೆ ಭುವನೇಶ್ವರ್ ಕಮ್ ಬ್ಯಾಕ್, ಶಮಿಗೂ ಹೀಗೇ ಆಗಲಿ ಎಂದ ಫ್ಯಾನ್ಸ್

ಮುಂದಿನ ಸುದ್ದಿ
Show comments