Publish Date: Wed, 19 Jan 2022 (08:50 IST)
Updated Date: Wed, 19 Jan 2022 (09:15 IST)
ಮುಂಬೈ: ಐಪಿಎಲ್ 2022 ಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಲಕ್ನೋ ಫ್ರಾಂಚೈಸಿ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗುವುದು ಪಕ್ಕಾ ಆಗಿದೆ. ಇದನ್ನು ಬಿಸಿಸಿಐ ಮೂಲಗಳೇ ದೃಢಪಡಿಸಿವೆ.
ಹೊಸ ಫ್ರಾಂಚೈಸಿಗಳು ಹರಾಜಿಗೆ ಮುನ್ನ ಮೂವರು ಆಟಗಾರರನ್ನು ಖರೀದಿಸಬಹುದು. ಅದರಂತೆ ರಾಹುಲ್ ಮೊದಲ ಆಯ್ಕೆಯಾಗಿ ತಂಡ ಖರೀದಿ ಮಾಡುತ್ತಿದ್ದು, ಉಳಿದಿಬ್ಬರು ಆಟಗಾರರಿಗೆ ಹುಡುಕಾಟ ನಡೆಸುತ್ತಿದೆ.
ಕಿಂಗ್ಸ್ ಪಂಜಾಬ್ ತಂಡದಲ್ಲಿ ರಾಹುಲ್ ಲಕ್ನೋ ಫ್ರಾಂಚೈಸಿಗೆ ನಾಯಕರಾಗಲಿದ್ದಾರೆ ಎಂಬ ಸುದ್ದಿ ಈ ಮೊದಲೇ ಹರಿದಾಡುತ್ತಿತ್ತು. ಅದರಂತೆ ಈಗ ಹೆಚ್ಚು ಕಡಿಮೆ ಖಚಿತವಾದಂತಾಗಿದೆ.