Daily Horoscope

ರಾಹುಲ್ ದ್ರಾವಿಡ್ ರಂತೆ ಈ ಕಾರಣಕ್ಕೆ ಕೆಎಲ್ ರಾಹುಲ್ ಕೂಡಾ ನಿಸ್ವಾರ್ಥಿಯಂತೆ!

Webdunia
ಶನಿವಾರ, 7 ಏಪ್ರಿಲ್ 2018 (06:43 IST)
ನವದೆಹಲಿ: ಐಪಿಎಲ್ ನ ಈ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ರನ್ನು ಕರ್ನಾಟಕ ಕೋಚ್ ಶಶಿಕಾಂತ್ ರಾಹುಲ್ ದ್ರಾವಿಡ್ ರಂತೆ ನಿಸ್ವಾರ್ಥಿ ಎಂದು ಹೊಗಳಿದ್ದಾರೆ.

ರಾಹುಲ್ ದ್ರಾವಿಡ್ ರಂತೇ ರಾಹುಲ್ ಕೂಡಾ ಹೆಚ್ಚಾಗಿ ತಂಡಕ್ಕಾಗಿ ಸ್ಥಾನವನ್ನೇ ತ್ಯಾಗ ಮಾಡಿದರೂ ಬೇಸರಿಸಿಕೊಳ್ಳದ ವ್ಯಕ್ತಿ. ಇದೀಗ ಐಪಿಎಲ್ ನಲ್ಲಿ ಪಂಜಾಬ್ ಪರ ಅವರಿಗೆ ಡಬಲ್ ಹೊಣೆಗಾರಿಕೆ ಇದೆ.

ಬ್ಯಾಟ್ಸ್ ಮನ್ ಆಗಿ ಪಂಜಾಬ್ ತಂಡಕ್ಕೆ ಆಧಾರವಾಗಬೇಕಲ್ಲದೆ, ವಿಕೆಟ್ ಕೀಪರ್ ಆಗಿಯೂ ರಾಹುಲ್ ನೆರವಾಗಬೇಕಿದೆ. ಆದರೆ ಈ ಎಲ್ಲಾ ಜವಾಬ್ದಾರಿಯನ್ನು ಯಾವುದೇ ಬೇಸರವಿಲ್ಲದೇ ನಿಭಾಯಿಸುವ ಕಾರಣಕ್ಕೆ ರಾಹುಲ್ ರನ್ನು ಈ ರೀತಿ ಹೊಗಳಿದ್ದಾರೆ ಕೋಚ್ ಶಶಿಕಾಂತ್. ದ್ರಾವಿಡ್ ರಂತೇ ತಂಡಕ್ಕೆ ಬೇಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ನಾನು ಕೀಪಿಂಗ್ ಮಾಡುವುದರಿಂದ ಇನ್ನೊಬ್ಬ ಆಟಗಾರನನ್ನು ಆಡಿಸಲು ಸಾಧ್ಯವಾಗುತ್ತದೆ ಎಂದಾದರೆ ಕೀಪಿಂಗ್ ಮಾಡಲು ನಾನು ರೆಡಿ ಎಂದು ಸ್ವಲ್ಪವೂ ಬೇಸರಿಸದ ರಾಹುಲ್ ಬಗ್ಗೆ ಕೋಚ್ ಶಶಿಕಾಂತ್ ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments