ಲಂಡನ್: ಗಾಯಗೊಂಡು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಲಂಡನ್ ನ ಸ್ಟ್ರಿಪ್ ಕ್ಲಬ್ (ಬೆತ್ತಲೆ ಕೂಟ) ನಲ್ಲಿದ್ದಾರೆ ಎನ್ನಲಾದ ಫೋಟೋವೊಂದು ಈಗ ವೈರಲ್ ಆಗಿದೆ.
ಸ್ಟ್ರಿಪ್ ಕ್ಲಬ್ ಎಂದರೆ ನೈಟ್ ಕ್ಲಬ್ ಅಥವಾ ಬೆತ್ತಲೆ ಕೂಟ ಎನ್ನಲಾಗುತ್ತದೆ. ಇಲ್ಲಿ ರಾಹುಲ್ ರೀತಿಯೇ ತೋರುವ ವ್ಯಕ್ತಿಯೊಬ್ಬರು ಲಲನೆಯ ನೃತ್ಯ ನೋಡುತ್ತಿರುವ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದು ಕೆಎಲ್ ರಾಹುಲ್ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ರಾಹುಲ್ ಫೋಟೋವನ್ನು ಟೀಕಿಸಿದರೆ ಮತ್ತೆ ಕೆಲವರು ಅವರು ಅಲ್ಲಿಗೆ ಹೋದರೆ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದಾರೆ.