Publish Date: Thu, 19 Jan 2023 (09:00 IST)
Updated Date: Thu, 19 Jan 2023 (09:14 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಬಹುಕಾಲದ ಗೆಳತಿ ಅಥಿಯಾ ಶೆಟ್ಟಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ.
ಇದೇ ತಿಂಗಳು 23 ರಂದು ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಕೆಎಲ್ ರಾಹುಲ್ ಅವರ ಮುಂಬೈ ಮನೆ ಮತ್ತು ಅಥಿಯಾ ತಂದೆ, ನಟ ಸುನಿಲ್ ಶೆಟ್ಟಿ ಬಂಗಲೆ ಸಿಂಗಾರಗೊಂಡಿದೆ.
ವಿವಾಹ ಕಾರ್ಯಕ್ರಮಗಳು ಸುನಿಲ್ ಶೆಟ್ಟಿಯವರ ಖಂಡಾಲ ನಿವಾಸದಲ್ಲಿ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ಎರಡೂ ನಿವಾಸದಲ್ಲಿ ವಿದ್ಯುತ್ ಅಲಂಕಾರ ತಯಾರಿ ಜೋರಾಗಿಯೇ ನಡೆದಿದೆ. ಮದುವೆಯಲ್ಲಿ ತೀರಾ ಖಾಸಗಿಯಾಗಿ ನಡೆಯಲಿದ್ದು, ಕುಟುಂಬಸ್ಥರು ಮಾತ್ರ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.