Select Your Language

Notifications

webdunia
webdunia
webdunia
webdunia

ನೀನೂ ನನ್ನ ತಮಾಷೆ ಮಾಡ್ತೀಯಾ? ಕೆಎಲ್ ರಾಹುಲ್ ಹುಸಿಮುನಿಸು

KL Rahul

Krishnaveni K

ಲಕ್ನೋ , ಸೋಮವಾರ, 8 ಏಪ್ರಿಲ್ 2024 (14:20 IST)
ಲಕ್ನೋ: ಗುಜರಾತ್ ಟೈಟನ್ಸ್ ವಿರುದ್ಧ ಗೆಲುವಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ತಮ್ಮ ತಂಡದ ಸಿಬ್ಬಂದಿ ಜೊತೆ ಫನ್ನಿ ಸಂಭಾಷಣೆಯೊಂದು ನಡೆಸಿದ್ದು ಇದೀಗ ವೈರಲ್ ಆಗಿದೆ.

ಗುಜರಾತ್ ವಿರುದ್ಧ ಲಕ್ನೋ 33 ರನ್ ಗಳ ಗೆಲುವು ಕಂಡಿತ್ತು. ಈ ಪಂದ್ಯದಲ್ಲಿ ಲಕ್ನೋ 163 ರನ್ ಗಳಿಸಿತ್ತು. ಹಾಗಿದ್ದರೂ ಯಶಸ್ವಿಯಾಗಿ ಟೋಟಲ್ ಡಿಫೆಂಡ್ ಮಾಡಿತ್ತು. ನಾಯಕ ಕೆಎಲ್ ರಾಹುಲ್ 31 ಎಸೆತ ಎದುರಿಸಿ 33 ರನ್ ಗಳಿಸಿದ್ದರು. ಅವರ ನಿಧಾನಗತಿಯ ಬ್ಯಾಟಿಂಗ್ ಗೆ ಕೆಲವರು ತಮಾಷೆ ಮಾಡಿದ್ದರು.

ಪಂದ್ಯದ ಬಳಿಕದ ಡ್ರೆಸ್ಸಿಂಗ್ ರೂಂ ವಾತಾವರಣ ಹೇಗಿತ್ತು ಎಂದು ಲಕ್ನೋ ತಂಡ ವಿಡಿಯೋ ಶೇರ್ ಮಾಡಿಕೊಂಡಿತ್ತು. ಈ ವಿಡಿಯೋದಲ್ಲಿ ಸಿಬ್ಬಂದಿಯೊಬ್ಬರು ರಾಹುಲ್ ಗೆ ನೀವು ಒಳ್ಳೆಯ ರಕ್ಷಣಾ ಸಚಿವರಾಗಬಹುದು ಎಂದು ತಮಾಷೆ ಮಾಡುತ್ತಾರೆ. ಇದಕ್ಕೆ ರಾಹುಲ್ ‘ನೀನೂ ನನ್ನ ತಮಾಷೆ ಮಾಡ್ತಿದ್ದೀಯಾ’ ಎಂದು ಹುಸಿಮುನಿಸು ತೋರಿಸುತ್ತಾರೆ. ಅದಕ್ಕೆ ಆತ ‘ಇಲ್ಲ, 160 ರನ್ ಗಳ ಮೊತ್ತವನ್ನು ಜಾಣತನದಿಂದ ರಕ್ಷಿಸಿದರಲ್ಲ ಅದಕ್ಕೆ ಹೇಳಿದೆ’ ಎಂದಿದ್ದಾರೆ.

ರಾಹುಲ್ ಈ ಪಂದ್ಯದಲ್ಲಿ ರಕ್ಷಣಾತ್ಮಕವಾಗಿ ಆಡಿದ್ದನ್ನೇ ಆತ ತಮಾಷೆ ಮಾಡಿದ್ದಾರೆ ಎಂದು ರಾಹುಲ್ ಹುಸಿಮುನಿಸು ತೋರಿದ್ದಾರೆ. ಆಯ್ತು ಬಿಡು ಎಂದು ಬಳಿಕ ನಗುತ್ತಾ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಸಿಎಸ್ ಕೆಗೆ ಮತ್ತೆ ಗೆಲುವಿನ ಹಳಿಗೆ ಮರಳುವ ಹಂಬಲ