Webdunia - Bharat's app for daily news and videos

Install App

ವೆಸ್ಟ್ ಇಂಡೀಸ್ ನಲ್ಲಿ ಕಿಂಗ್ ಕೊಹ್ಲಿ ಮುಂದಿದೆ ಮೂರು ಟಾರ್ಗೆಟ್

Webdunia
ಬುಧವಾರ, 12 ಜುಲೈ 2023 (08:20 IST)
Photo Courtesy: Twitter
ಡೊಮಿನಿಕಾ: ಭಾರತ ಮತ್ತು ವೆಸ್ಟ್‍ ಇಂಡೀಸ್ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಾದ ಬಳಿಕ ಏಕದಿನ ಸರಣಿ ಆರಂಭವಾಗಲಿದೆ.

ಈ ಎರಡೂ ಸರಣಿಗಳಲ್ಲಿ ಕಿಂಗ್ ಕೊಹ್ಲಿ ಆಡಲಿದ್ದಾರೆ. ಪ್ರತೀ ಬಾರಿ ಕೊಹ್ಲಿ ಕಣಕ್ಕಿಳಿದಾಗ ಒಂದಿಲ್ಲೊಂದು ದಾಖಲೆಯಾಗೇ ಆಗುತ್ತದೆ. ಈ ಬಾರಿಯೂ ವಿಂಡೀಸ್ ಪ್ರವಾಸದಲ್ಲಿ ಅವರು ಮೂರು ದಾಖಲೆಗಳನ್ನು ಮಾಡುವ ಸಾಧ‍್ಯತೆಯಿದೆ.

ಈ ಸರಣಿಯಲ್ಲಿ ಅವರು ಒಂದು ಶತಕ ಗಳಿಸಿದರೂ ವಿಂಡೀಸ್ ವಿರುದ್ಧ ಗರಿಷ್ಠ ಶತಕ ಗಳಿಸಿದ ದಾಖಲೆ ಮಾಡಲಿದ್ದಾರೆ. 11 ಶತಕ ಗಳಿಸಿರುವ ಕೊಹ್ಲಿ ಇನ್ನು ಒಂದು ಶತಕ ಗಳಿಸಿದರೆ ಸುನಿಲ್ ಗವಾಸ್ಕರ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.  ವಿಂಡೀಸ್ ವಿರುದ್ಧ ಟೆಸ್ಟ್ ನಲ್ಲಿ ಕೊಹ್ಲಿ 1365 ರನ್ ಗಳಿಸಿದ್ದು, ದ್ರಾವಿಡ್ ಗಳಿಸಿರುವ 1838 ರನ್ ಗಳ ದಾಖಲೆ ಮುರಿಯಬಹುದಾಗಿದೆ. ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ವಿಂಡೀಸ್ ವಿರುದ್ಧ 3653 ರನ್ ಗಳಿಸಿರುವ ಕೊಹ್ಲಿ ವಿಂಡೀಸ್ ವಿರುದ್ಧ ಗರಿಷ್ಠ ರನ್ ಗಳಿಸಿದ ವಿಶ್ವ ದಾಖಲೆ ಮಾಡಬಹುದಾಗಿದೆ. ಇದೀಗ ಆ ದಾಖಲೆ ದ.ಆಫ್ರಿಕಾದ ಜ್ಯಾಕಸ್ ಕ್ಯಾಲಿಸ್ ಹೆಸರಲ್ಲಿದ್ದು ಅವರು 4,120 ರನ್ ಗಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

ಮುಂದಿನ ಸುದ್ದಿ
Show comments