Publish Date: Sun, 07 Jul 2019 (09:40 IST)
Updated Date: Sun, 07 Jul 2019 (09:41 IST)
ಲಂಡನ್: ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಕಿಡಿಗೇಡಿಗಳು ಮೈದಾನದ ಬಳಿ ಕಾಶ್ಮೀರಕ್ಕೆ ನ್ಯಾಯ ಒದಗಿಸಿ ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಇದೇ ವಿಶ್ವಕಪ್ ಕೂಟದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ವೇಳೆ ಬಲೂಚಿಸ್ತಾನ ರಾಜಕೀಯ ವಿಚಾರವಾಗಿ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿತ್ತು.
ಇದಾದ ಬಳಿಕ ಐಸಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಈ ರೀತಿಯ ಬಿತ್ತಿಫಲಕಗಳನ್ನು ಮೈದಾನದ ಒಳಗೆ ತೆಗೆದುಕೊಂಡು ಹೋಗಲು ಪ್ರೇಕ್ಷಕರಿಗೆ ಅನುವು ಮಾಡಿಕೊಡದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಹಾಗಿದ್ದರೂ ಇಂತಹ ಘಟನೆ ಮತ್ತೆ ಮರುಕಳಿಸಿರುವುದು ವಿಪರ್ಯಾಸ.