Publish Date: Mon, 12 Nov 2018 (17:22 IST)
Updated Date: Mon, 12 Nov 2018 (17:24 IST)
ನಾಗ್ಪುರ: ಈ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ಎದುರು ಮೊದಲ ಪಂದ್ಯವಾಡುತ್ತಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ ಎದುರಾಳಿಯ 8 ವಿಕೆಟ್ ಕಿತ್ತು 245 ರನ್ ಗೆ ನಿಯಂತ್ರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಆರಂಭದಲ್ಲೇ 2 ವಿಕೆಟ್ ಕಿತ್ತು ಸಂಕಷ್ಟಕ್ಕೀಡಾಯಿತು. ಈ ಸಂದರ್ಭದಲ್ಲಿ ಜತೆಯಾದ ವಾಸಿಂ ಜಾಫರ್ ಹಾಗೂ ಗಣೇಶ್ ಸತೀಶ್ ಉತ್ತಮ ಜತೆಯಾಟವಾಡಿ ಚೇತರಿಕೆ ನೀಡಿದರು.
ಆದರೆ ನಂತರ ಕರ್ನಾಟಕ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಕೀಳುತ್ತಾ ಹೋದರು. ಹೀಗಾಗಿ ವಿದರ್ಭದ ದೊಡ್ಡ ಮೊತ್ತದ ಕನಸು ಈಡೇರಲಿಲ್ಲ. ಕರ್ನಾಟಕದ ಪರ ವೇಗಿ ಅಭಿಮನ್ಯು ಮಿಥುನ್ ಮತ್ತು ಜಗದೀಶ ಸುಚಿತ್ ತಲಾ 3 ವಿಕೆಟ್ ಕಿತ್ತರೆ, ನಾಯಕ ವಿನಯ್ ಕುಮಾರ್ ಮತ್ತು ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.