Select Your Language

Notifications

webdunia
webdunia
webdunia
webdunia

Kane Williamson: ನ್ಯೂಜಿಲೆಂಡ್ ಕಳಪೆ ಪ್ರದರ್ಶನದಿಂದ ಬೇಸತ್ತು ನಾಯಕತ್ವ ತ್ಯಜಿಸಿದ ಕೇನ್ಸ್ ವಿಲಿಯಮ್ಸನ್

Kane Williamson

Krishnaveni K

ವೆಲ್ಲಿಂಗ್ಟನ್ , ಬುಧವಾರ, 19 ಜೂನ್ 2024 (11:22 IST)
Photo Credit: Facebook
ವೆಲ್ಲಿಂಗ್ಟನ್: ಈ ಬಾರಿ ಟಿ20 ವಿಶ್ವಕಪ್ ನಲ್ಲಿ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇನ್ ವಿಲಿಯಮ್ಸನ್ ಕೇವಲ ಟಿ20 ಮಾತ್ರವಲ್ಲ, ಏಕದಿನ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ನ್ಯೂಜಿಲೆಂಡ್ ಕಂಡ ಅತ್ಯಂತ ಯಶಸ್ವೀ ನಾಯಕರಲ್ಲಿ ಒಬ್ಬರಾಗಿದ್ದ ಕೇನ್ ವಿಲಿಯಮ್ಸನ್ ಇದೀಗ ತಂಡದ ಕಳಪೆ ಪ್ರದರ್ಶನದಿಂದ ಬೇಸರಗೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ.

ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ಲೀಗ್ ಹಂತದಲ್ಲೇ ಹೊರಬಿದ್ದಿದೆ. ಹೀಗಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ, 2024-25 ರ ಋತುವಿನ ಮಂಡಳಿಯ ಕೇಂದ್ರೀಯ ಗುತ್ತಿಗೆ ಒಪ್ಪಂದವನ್ನೂ ನಿರಾಕರಿಸಿದ್ದಾರೆ. ಕೇವಲ ಬ್ಯಾಟಿಗನಾಗಿ ನನ್ನ ವೃತ್ತಿ ಜೀವನವನ್ನು ಮುಂದುವರಿಸಲು ಬಯಸುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗೆ ಅವರು ತಿಳಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ನಾಯಕತ್ವದ ಬಗ್ಗೆ ಅವರು ಇದುವರೆಗೆ ಏನೂ ಹೇಳಿಲ್ಲ.

ನ್ಯೂಜಿಲೆಂಡ್ ತಂಡವನ್ನು 91 ಏಕದಿನ ಪಂದ್ಯಗಳಲ್ಲಿ ಕೇನ್ ಮುನ್ನಡೆಸಿದ್ದು 46 ಪಂದ್ಯಗಳಲ್ಲಿ ಗೆಲುವು, 40 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್ ನಲ್ಲಿ 75 ಪಂದ್ಯಗಳಿಗೆ ನಾಯಕರಾಗಿದ್ದು 39 ಗೆಲುವು, 34 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಂಗಾರ ನಮ್ಮ ನೀರಜ್ ಚೋಪ್ರಾ: ಪಾವೊ ನೂರ್ಮಿ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಜ್ಯಾವೆಲ್ ಪಟು