Publish Date: Fri, 15 Apr 2022 (16:33 IST)
Updated Date: Fri, 15 Apr 2022 (16:35 IST)
ಲಂಡನ್: ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವಕ್ಕೆ ಜೋ ರೂಟ್ ದಿಡೀರ್ ಆಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ನಲ್ಲಿ ತೋರಿದ ಕಳಪೆ ನಿರ್ವಹಣೆಯಿಂದ ಬೇಸತ್ತು ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆಶಸ್ ಸರಣಿಯಲ್ಲಿ ವೈಟ್ ವಾಶ್ ಅನುಭವಿಸಿದ್ದ ಇಂಗ್ಲೆಂಡ್ ವೆಸ್ಟ್ ಇಂಡೀಸ್ ವಿರುದ್ಧವೂ ಸೋತಿತ್ತು.
2017 ರಲ್ಲಿ ಅಲೆಸ್ಟರ್ ಕುಕ್ ಬಳಿಕ ಇಂಗ್ಲೆಂಡ್ ಟೆಸ್ಟ್ ನಾಯಕನಾಗಿ ಆಯ್ಕೆಯಾದ ಜೋ ರೂಟ್ ಇಂಗ್ಲೆಂಡ್ ನ ಯಶಸ್ವೀ ನಾಯಕನೆನಿಸಿಕೊಂಡಿದ್ದರು. ಇದೀಗ ಬೆನ್ ಸ್ಟೋಕ್ಸ್ ಮುಂದಿನ ನಾಯಕನಾಗುವ ಎಲ್ಲಾ ಸಾಧ‍್ಯತೆಗಳಿವೆ.