Publish Date: Fri, 01 Jul 2022 (09:58 IST)
Updated Date: Fri, 01 Jul 2022 (09:59 IST)
ಎಡ್ಜ್ ಬಾಸ್ಟನ್: ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಲಿರುವ ವೇಗಿ ಜಸ್ಪ್ರೀತ್ ಬುಮ್ರಾ ಈ ಬಗ್ಗೆ ಭಾರೀ ಉತ್ಸಾಹದಲ್ಲಿದ್ದಾರೆ.
ನಾಯಕನಾಗಿ ಕಣಕ್ಕಿಳಿಯುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿರುವ ಬುಮ್ರಾ ಭಾರತದ ಯಶಸ್ವೀ ನಾಯಕರೆನಿಸಿಕೊಂಡ ಎಂ.ಎಸ್. ಧೋನಿ ಮಾತು ಸ್ಮರಿಸಿದ್ದಾರೆ.
ಧೋನಿ ಹೇಳಿದ ಮಾತು ನನಗೆ ಈಗ ನೆನಪಿಗೆ ಬರುತ್ತಿದೆ. ನಾನು ನಾಯಕನಾಗಿ ಟೀಂ ಇಂಡಿಯಾ ಮುನ್ನಡೆಸುವ ಮೊದಲು ಬೇರೆ ಯಾವುದೇ ತಂಡದ ನಾಯಕತ್ವವನ್ನೂ ವಹಿಸಿರಲಿಲ್ಲ ಎಂದು ಧೋನಿ ಹೇಳಿದ್ದರು. ಆದರೂ ಧೋನಿ ಮುಂದೆ ಯಶಸ್ವೀ ನಾಯಕ ಎಂಬ ಖ್ಯಾತಿ ಪಡೆದರು. ಹೀಗಾಗಿ ನಾನು ಹಿಂದೆ ಏನು ಮಾಡಿದ್ದೇನೆ ಎಂಬುದರ ಬಗ್ಗೆ ಅಲ್ಲ, ಸದ್ಯಕ್ಕೆ ಏನು ಮಾಡಬಹುದು ಎಂಬ ಬಗ್ಗೆ ಗಮನ ಕೇಂದ್ರೀಕರಿಸುತ್ತೇನೆ. ಒತ್ತಡದಲ್ಲಿ ಸಿಗುವ ಯಶಸ್ಸಿನ ರುಚಿ ಯಾವತ್ತೂ ಹೆಚ್ಚು ಎಂದಿದ್ದಾರೆ ಬುಮ್ರಾ.