ಲಂಡನ್: ಟೆಸ್ಟ್ ಪಂದ್ಯ ಮುಗಿದ ಬಳಿಕ ಎರಡೇ ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಆಡಬೇಕಿದೆ. ಆದರೆ ಈ ಸರಣಿಯ ಮೊದಲ ಪಂದ್ಯಕ್ಕೆ ಐರ್ಲೆಂಡ್ ನಲ್ಲಿ ಆಡಿದ್ದ ಯುವ ಟೀಂ ಇಂಡಿಯಾ ಪಡೆಯನ್ನೇ ಕಣಕ್ಕಿಳಿಸಲು ಆಯ್ಕೆಗಾರರು ತೀರ್ಮಾನಿಸಿದ್ದಾರೆ.
ಟೆಸ್ಟ್ ಪಂದ್ಯ ಮುಗಿದ ಬಳಿಕ ಸ್ವಲ್ಪವೂ ಬಿಡುವಿಲ್ಲದೇ ಟಿ20 ಪಂದ್ಯವಾಡಬೇಕಿರುವುದರಿಂದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಸರಣಿ ವಿಜೇತವಾಗಿದ್ದ ಯುವ ಪಡೆ ಕಣಕ್ಕಿಳಿಯಲಿದೆ. ದ್ವಿತೀಯ ಟಿ20 ಪಂದ್ಯಕ್ಕಾಗುವಾಗ ಹಿರಿಯರನ್ನೊಳಗೊಂಡ ಟೀಂ ಇಂಡಿಯಾ ವಾಪಸ್ ಆಗಲಿದೆ.
ಟೆಸ್ಟ್ ಪಂದ್ಯ ತಪ್ಪಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಟಿ20 ಸರಣಿಯ ಮೊದಲ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ. ಹೀಗಾಗಿ ಮೊದಲ ಟಿ20 ಪಂದ್ಯದಿಂದಲೇ ಅವರು ನಾಯಕರಾಗಿರುತ್ತಾರಾ ಅಥವಾ ನಾಯಕತ್ವವನ್ನೂ ಹಾರ್ದಿಕ್ ನಾಯಕರಾಗಿ ಮುಂದುವರಿಯುತ್ತಾರಾ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.