ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ರವೀಂದ್ರ ಜಡೇಜ ಕೈಚಳಕ ತೋರಿದ್ದಾರೆ. ಹೀಗಾಗಿ, ನ್ಯೂಜಿಲೆಂಡ್ ತಂಡ 174 ರನ್‌ಗೆ ಕುಸಿದಿದೆ. ಹೀಗಾಗಿ ಭಾರತ ತಂಡದ ಗೆಲುವಿಗೆ 147 ರನ್ ಬೇಕಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡವು ಡೆರಿಲ್ ಮಿಚೆಲ್ (82 ರನ್, 129 ಎಸೆತ), ವಿಲ್ ಯಂಗ್ (71 ರನ್, 138 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 65.4 ಓವರ್ಗಳಲ್ಲಿ 235 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಕ್ರಮವಾಗಿ ಐದು ಮತ್ತು ನಾಲ್ಕು ವಿಕೆಟ್ ಪಡೆದಿದ್ದರು.
ಮೂರು ಪಂದ್ಯಗಳ ಸರಣಿಯನ್ನು ಪ್ರವಾಸಿ ತಂಡ ಈಗಾಗಲೇ 2–0ರಿಂದ ಗೆದ್ದುಕೊಂಡಿದೆ. ಭಾರತ ತಂಡವು ಕೊನೆಯ ಪಂದ್ಯದಲ್ಲಿ ಗೆದ್ದು ವೈಟ್‌ವಾಷ್ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಇದಕ್ಕೆ ಉತ್ತರವಾಗಿ ಭಾರತ ತಂಡವು ಶುಭಮನ್ ಗಿಲ್ (90 ರನ್, 146 ಎಸೆತ), ರಿಷಭ್ ಪಂತ್ (60 ರನ್, 59 ಎಸೆತ) ಅರ್ಧಶತಕಗಳ ಫಲವಾಗಿ 263 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಎದುರಾಳಿಗಳ ವಿರುದ್ಧ 28 ರನ್ಗಳಅ ಅತ್ಯಲ್ಪ ಮುನ್ನಡೆಯನ್ನು ಭಾರತ ತಂಡ ಸಾಧಿಸಿತು. ನ್ಯೂಜಿಲೆಂಡ್ ಪರ ಏಜಾಜ್ ಪಟೇಲ್ ಐದು ವಿಕೆಟ್ ಪಡೆದಿದ್ದರು.
28 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್‌ಗಳು ಕಾಡಿದರು. ಜಡೇಜ ಐದು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್ ಪಡೆದರು. ಈ ಮೂಲಕ ಭಾರತ ತಂಡವು 147 ರನ್ಗಳ ಗುರಿಯನ್ನು ಪಡೆದಿದೆ.