ಮುಲ್ಲನ್‌ಪುರದಲ್ಲಿ ನಡೆದ ನಿನ್ನೆಯ ಐಪಿಎಲ್ ಪಂದ್ಯಾಟದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಈ ಋತುವಿನ ಮೊದಲ ಸೋಲು ಅನುಭವಿಸಿತು. ಆದರೆ ಪಂದ್ಯದ ನಂತರ ನಡೆದ ಘಟನೆ ಅಭಿಮಾನಿಗಳನ್ನು ರೋಮಾಂಚನಗೊಳಿಸಿತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಂಜಾಬ್ ಕಿಂಗ್ಸ್ ಒಡತಿ, ನಟಿ ಪ್ರೀತಿ ಜಿಂಟಾ ಅವರು ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ ಅಪ್ಪುಗೆ ನೀಡಿ, ಸಮಾಧಾನ ಪಡಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದ ನಂತರ ಸಾಂಪ್ರದಾಯಿಕ ಭೇಟಿ ಮತ್ತು ಶುಭಾಶಯಕ್ಕಾಗಿ ಆಟಗಾರರು ತೆರಳುತ್ತಿದ್ದಂತೆ, ಎಲ್ಲರ ಕಣ್ಣುಗಳು ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಇದ್ದವು. ಈ ವೇಳೆ ತಂಡದ ಮಾಲಕಿ , ಸದಾ ನಗುತ್ತಿರುವ ಪ್ರೀತಿ ಜಿಂಟಾ ಬಂದು ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಅಪ್ಪುಗೆ ನೀಡಿ, ಸಮಾಧಾನ ಪಡಿಸಿದರು.
ಈ ವೀಡಿಯೊ ಕೆಲವೇ ನಿಮಿಷಗಳಲ್ಲಿ ವೈರಲ್ ಆಯಿತು. ಜಿಂಟಾ ಅವರ ನಡವಳಿಕೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲವರು ಅವರನ್ನು "ಐಪಿಎಲ್‌ನಲ್ಲಿ ಅತ್ಯುತ್ತಮ ಮಾಲೀಕರು" ಎಂದೂ ಕರೆದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ಒಂದು ಅಂಶವನ್ನು ಅರ್ಥಮಾಡಿಕೊಂಡಿದ್ದಾರೆ. ಕೆಲವರು ಐಪಿಎಲ್‌ನಂತಹ ದೊಡ್ಡ ಲೀಗ್‌ನಲ್ಲಿ ಹೃದಯವಂತ ಮಾಲೀಕರು ಕಾಣಲು ಸಿಗುವುದು ತುಂಬಾ ಕಡಿಮೆ ಎಂದರು.