Webdunia - Bharat's app for daily news and videos

Install App

ಯಾರ ಫೋನ್ ಕರೆಯೂ ಸ್ವೀಕರಿಸುತ್ತಿಲ್ಲ ಇಶಾನ್ ಕಿಶನ್

Krishnaveni K
ಶನಿವಾರ, 10 ಫೆಬ್ರವರಿ 2024 (10:51 IST)
ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಬಗ್ಗೆ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಆಕಾಶ್ ಚೋಪ್ರಾ  ಅಚ್ಚರಿಯ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.

ಮಾನಸಿಕ ಬಳಲಿಕೆ ಕಾರಣ ನೀಡಿ ದ.ಆಫ್ರಿಕಾ ಸರಣಿಯಿಂದ ಹಿಂದೆ ಸರಿದಿದ್ದ ಇಶಾನ್ ಬಳಿಕ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬೇಕಾದರೆ ದೇಶೀಯ ಕ್ರಿಕೆಟ್ ಆಡಿ ಫಿಟ್ನೆಸ್ ಸಾಬೀತುಪಡಿಸಬೇಕೆಂದು ಕೋಚ್ ದ್ರಾವಿಡ್ ಸೂಚನೆ ನೀಡಿದ್ದರು.

ಅದಕ್ಕೂ ಕ್ಯಾರೇ ಎನ್ನದ ಇಶಾನ್ ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಸಹೋದರರೊಂದಿಗೆ ಐಪಿಎಲ್ ಗೆ ಸಿದ್ಧತೆ ನಡೆಸುವುದು ಕಂಡುಬಂದಿದೆ. ಆ ಮೂಲಕ ಇಶಾನ್ ರಾಷ್ಟ್ರೀಯ ತಂಡಕ್ಕೆ ಮರಳುವ ಇರಾದೆಯೇ ತೋರುತ್ತಿಲ್ಲ. ತನ್ನನ್ನು ಕಡೆಗಣಿಸಿ ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಮಣೆ ಹಾಕಿರುವುದು ಇಶಾನ್ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅವರು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಜೊತೆ ಮುಸುಕಿನ ಗುದ್ದಾಟವಾಡುತ್ತಿದ್ದಾರೆ ಎಂಬ ರೂಮರ್ ಗಳಿವೆ.

ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದ ಆಕಾಶ್ ಚೋಪ್ರಾ
ಸದ್ಯಕ್ಕೆ ಟೀಂ ಇಂಡಿಯಾದಿಂದ ದೂರವಿರುವ ಇಶಾನ್ ಯಾರ ಜೊತೆಗೂ ಫೋನ್ ಸಂಪರ್ಕವನ್ನೂ ಮಾಡುತ್ತಿಲ್ಲ. ಯಾರ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಆಕಾಶ್ ಚೋಪ್ರಾ ಯೂ ಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇಶಾನ್ ತಂಡಕ್ಕೆ ಮರಳಬೇಕಾದರೆ ದೇಶೀಯ ಕ್ರಿಕೆಟ್ ಆಡಬೇಕು ಎಂಬ ದ್ರಾವಿಡ್ ನಿಲುವು ಸರಿಯಾಗಿದೆ. ಮೊದಲು ಅವರು ಸಂಪರ್ಕಕ್ಕೆ ಸಿಗಬೇಕು. ಬಳಿಕ ದೇಶೀಯ ಕ್ರಿಕೆಟ್ ಆಡಬೇಕು. ಇಲ್ಲದೇ ಹೋದರೆ ಅವರ ವೃತ್ತಿ ಜೀವನ ಮುಳುಗಬಹುದು ಎಂದು ಆಕಾಶ‍್ ಚೋಪ್ರಾ ಹೇಳಿದ್ದಾರೆ. ಇದೀಗ ಇಶಾನ್ ಯಾರ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂಬ ಅಚ್ಚರಿಯ ವಿಚಾರವನ್ನು ಹೊರಹಾಕಿದ್ದಾರೆ. ಹೀಗಾಗಿ ಇಶಾನ್ ತಂಡಕ್ಕೆ ಮರಳುವ ಇರಾದೆಯೇ ಹೊಂದಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ನಡುವೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments