ಕೊನೆಗೂ ಕ್ರಿಕೆಟ್ ಗೆ ಮರಳಲು ಸಿದ್ಧರಾದ ಇಶಾನ್ ಕಿಶನ್

Krishnaveni K
ಮಂಗಳವಾರ, 13 ಫೆಬ್ರವರಿ 2024 (15:52 IST)
Photo Courtesy: Twitter
ಮುಂಬೈ: ಮಾನಸಿಕ ಬಳಲಿಕೆ ಕಾರಣ ನೀಡಿ ಇಷ್ಟು ದಿನ ಕ್ರಿಕೆಟ್ ನಿಂದ ದೂರವಿದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಕ್ರಿಕೆಟಿಗ ಇಶಾನ್ ಕಿಶನ್ ಇದೀಗ ಕ್ರಿಕೆಟ್ ಗೆ ಮರಳಲು ಸಿದ್ಧರಾಗಿದ್ದಾರೆ.
 

ಇಶಾನ್ ಕಿಶನ್ ಮುಂಬೈನಲ್ಲಿ ನಡೆಯಲಿರುವ ಡಿವೈ ಪಾಟೀಲ್ ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ ಎಂಬ ಮಾಹಿತಿಯಿದೆ. ಈ ಮೂಲಕ ಮತ್ತೆ ಸಕ್ರಿಯ ಕ್ರಿಕೆಟ್ ಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಇಶಾನ್ ತಮ್ಮ ಐಪಿಎಲ್ ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ನಡೆಸುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ದ.ಆಫ್ರಿಕಾ ಟೆಸ್ಟ್ ಸರಣಿಗೆ ಆಯ್ಕೆಯಾದ ಬಳಿಕ ಕೊನೆಯ ಕ್ಷಣದಲ್ಲಿ ಮಾನಸಿಕವಾಗಿ ಬಳಲಿರುವುದಾಗಿ ಕಾರಣ ನೀಡಿ ತಂಡದಿಂದ ಹೊರನಡೆದಿದ್ದ ಇಶಾನ್ ಕಿಶನ್ ಗೆ ಕೋಚ್ ದ್ರಾವಿಡ್ ರಣಜಿ ಟ್ರೋಫಿ ಆಡಿ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಿದ್ದರು. ಆದರೆ ಇದುವರೆಗೆ ಇಶಾನ್ ರಣಜಿ ಆಡದೇ ಮ್ಯಾನೇಜ್ ಮೆಂಟ್ ಸೂಚನೆಯನ್ನು ಕಡೆಗಣಿಸಿದ್ದರು. ಇದರಿಂದಾಗಿ ಇಶಾನ್ ಮೇಲೆ ಬಿಸಿಸಿಐ ಗರಂ ಆಗಿತ್ತು. ಇದೇ ಕಾರಣಕ್ಕೆ ಅವರನ್ನು ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ನಡೆಸುವುದನ್ನು ನೋಡಿ ಇಶಾನ್ ಸದ್ಯಕ್ಕೆ ಟೀಂ ಇಂಡಿಯಾಗೆ ಮರಳುವ ಇರಾದೆಯೇ ಹೊಂದಿಲ್ಲ ಎಂಬ ಮಾತಿತ್ತು.  ರಾಷ್ಟ್ರೀಯ ತಂಡವನ್ನು ಕಡೆಗಣಿಸಿ ಐಪಿಎಲ್ ಗೆ ಪ್ರಾಶಸ್ತ್ಯ ನೀಡುವ ಆಟಗಾರರಿಗೆ ಖಡಕ್ ಸಂದೇಶ ಕೊಡಲು ಬಿಸಿಸಿಐ ತಯಾರಿ ನಡೆಸಿತ್ತು. ಇದರ ಬೆನ್ನಲ್ಲೇ ಇಶಾನ್ ಡಿವೈ ಪಾಟೀಲ್ ಟೂರ್ನಿ ಆಡಲು ಸಿದ್ಧರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೆಳೆತನ ಅಂದ್ರೆ ಹೀಗಿರಬೇಕು: ಸ್ಮೃತಿ ಮಂಧಾನಗಾಗಿ ದೊಡ್ಡ ನಿರ್ಧಾರ ಕೈಗೊಂಡ ಜೆಮಿಮಾ ರೊಡ್ರಿಗಸ್

ಧೋನಿ ಮನೆಯಲ್ಲಿ ಪಾರ್ಟಿ, ಆದ್ರೆ ಎಲ್ಲರಿಗಿಲ್ಲ ಆಹ್ವಾನ: ಕೊಹ್ಲಿಗೆ ಧೋನಿಯಿಂದ ಸ್ಪೆಷಲ್ ಟ್ರೀಟ್ಮೆಂಟ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

ಮುಂದಿನ ಸುದ್ದಿ
Show comments