Webdunia - Bharat's app for daily news and videos

Install App

ರಾಜ್ ಕೋಟ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟಿಗನನ್ನು ತಡೆದ ಸಿಬ್ಬಂದಿ

Krishnaveni K
ಮಂಗಳವಾರ, 13 ಫೆಬ್ರವರಿ 2024 (14:58 IST)
Photo Courtesy: Twitter
ರಾಜ್ ಕೋಟ್: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನಾಡಲು ರಾಜ್ ಕೋಟ್ ಗೆ ಬಂದಿಳಿದ ಇಂಗ್ಲೆಂಡ್ ಆಟಗಾರರಲ್ಲಿ ಒಬ್ಬರಾದ ರೆಹಾನ್ ಅಹ್ಮದ್ ರನ್ನು ವಿಮಾನ ನಿಲ್ದಾಣ ಸಿಬ್ಬಂದಿ ತಡೆದರು.

ಎರಡನೇ ಟೆಸ್ಟ್ ಪಂದ್ಯದ ಬಳಿಕ ಇಂಗ್ಲೆಂಡ್ ತಂಡ ಭಾರತದಿಂದ ಅಬುದಾಬಿಗೆ ತೆರಳಿತ್ತು. ಕೆಲವು ದಿನದ ವಿಶ್ರಾಂತಿ, ಅಭ್ಯಾಸದ ಬಳಿಕ ಇದೀಗ ರಾಜ್ ಕೋಟ್ ಗೆ ಬಂದಿಳಿದಿದೆ. ಆದರೆ ಭಾರತಕ್ಕೆ ಬಂದಿಳಿದಾಗ ಇಂಗ್ಲೆಂಡ್ ಆಟಗಾರನ ವೀಸಾ ಸಮಸ್ಯೆಯಿಂದಾಗಿ ಅಧಿಕಾರಿಗಳು ತಡೆ ಹಿಡಿದರು.

ವಾಸ್ತವವಾಗಿ ರೆಹಾನ್ ಸಿಂಗಲ್ ಎಂಟ್ರಿ ವೀಸಾ ಹೊಂದಿದ್ದರು. ಸುದೀರ್ಘ ಮಾತುಕತೆಯ ಬಳಿಕ ರೆಹಾನ್ ಗೆ ಇಂಗ್ಲೆಂಡ್ ತಂಡದ  ಜೊತೆ ಹೋಟೆಲ್ ಗೆ ತೆರಳಲು ಅವಕಾಶ ನೀಡಲಾಯಿತು. ಆದರೆ 24 ಗಂಟೆಯೊಳಗೆ ದಾಖಲೆ ಸರಿಪಡಿಸಲು ಅವಕಾಶ ನೀಡಲಾಗಿದೆ. ಫೆಬ್ರವರಿ 15 ರಂದು ಮೂರನೇ ಪಂದ್ಯ ನಡೆಯಲಿದ್ದು, ಅದಕ್ಕೆ ಮೊದಲು ರೆಹಾನ್ ತಮ್ಮ ವೀಸಾ ಸಮಸ್ಯೆ ಸರಿಪಡಿಸಿಕೊಳ್ಳಬೇಕಿದೆ.

ಎರಡು ದಿನಗಳೊಳಗೆ ರೆಹಾನ್ ಮತ್ತೆ ವೀಸಾ ಮಾಡಿಸಬೇಕು. ಅಲ್ಲಿಯವರೆಗೆ ಮಾತ್ರ ಅವರಿಗೆ ಇಂಗ್ಲೆಂಡ್ ತಂಡದೊಂದಿಗೆ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ವೀಸಾ ಸಮಸ್ಯೆ ಬಗೆಹರಿಯದಿದ್ದರೆ ಅವರು ಕೂಡಾ ಭಾರತ ಬಿಟ್ಟು ತೆರಳಬೇಕಾಗುತ್ತದೆ. ಇದಕ್ಕೆ ಮೊದಲು ಭಾರತ ಪ್ರವಾಸ ಆರಂಭದಲ್ಲಿ ಇಂಗ್ಲೆಂಡ್ ಆಟಗಾರ ಶೊಯೇಬ್ ಬಾಶಿರ್ ಕೂಡಾ ವೀಸಾ ಸಮಸ್ಯೆಯಿಂದ ತಡವಾಗಿ ಭಾರತಕ್ಕೆ ಆಗಮಿಸಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments