Select Your Language

Notifications

webdunia
webdunia
webdunia
webdunia

‘ಕ್ಯಾಪ್ಟನ್’ ಶ್ರೇಯಸ್ ಐಯರ್ ಖರೀದಿಗೆ ಮುಗಿಬಿದ್ದಿರುವ ಮೂರು ಫ್ರಾಂಚೈಸಿಗಳು

‘ಕ್ಯಾಪ್ಟನ್’ ಶ್ರೇಯಸ್ ಐಯರ್ ಖರೀದಿಗೆ ಮುಗಿಬಿದ್ದಿರುವ ಮೂರು ಫ್ರಾಂಚೈಸಿಗಳು
ಮುಂಬೈ , ಬುಧವಾರ, 19 ಜನವರಿ 2022 (09:10 IST)
ಮುಂಬೈ: ಈ ಬಾರಿ ಐಪಿಎಲ್ ಗೆ ಮೊದಲು ಮೂರು ಫ‍್ರಾಂಚೈಸಿಗಳು ತಮ್ಮ ತಂಡಕ್ಕೆ ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಪೈಕಿ ಮೂರೂ ತಂಡಗಳು ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿರುವ ಮಾಜಿ ನಾಯಕ ಶ್ರೇಯಸ್ ಐಯರ್ ಮೇಲೆ ಕಣ್ಣಿಟ್ಟಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೆಕೆಆರ್, ಕಿಂಗ್ಸ್ ಪಂಜಾಬ್ ಸಮರ್ಥ ನಾಯಕನ ಹುಡುಕಾಟದಲ್ಲಿದೆ. ಈ ಮೂರೂ ಫ್ರಾಂಚೈಸಿಗಳು ಶ್ರೇಯಸ್ ಐಯರ್ ರನ್ನು ಖರೀದಿಸಲು ಉತ್ಸುಹಕವಾಗಿವೆ.

ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಶ್ರೇಯಸ್ ಗೆ ಭರ್ಜರಿ ಬೇಡಿಕೆ ಬರುವ ನಿರೀಕ್ಷೆಯಿದೆ. ಡೆಲ್ಲಿ ತಂಡದ ನಾಯಕರಾಗಿ ಯಶಸ್ಸು ಕಂಡಿದ್ದ ಶ್ರೇಯಸ್ ಬಳಿಕ ಗಾಯದಿಂದಾಗಿ ನಾಯಕತ್ವ ಕಳೆದುಕೊಂಡರು. ಈಗ ಅವರು ಫಿಟ್ ಆಗಿದ್ದು, ಐಪಿಎಲ್ ಫ್ರಾಂಚೈಸಿಗಳೂ ಅವರನ್ನು ಖರೀದಿ ತಮ್ಮ ತಂಡದ ನಾಯಕನಾಗಿ ಮಾಡುವ ಉತ್ಸಾಹದಲ್ಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿ ನಾಯಕ