Publish Date: Sat, 02 May 2026 (19:23 IST)
Updated Date: Sat, 02 May 2026 (19:25 IST)
ಚೆನ್ನೈ: ಐಪಿಎಲ್ 2026 ರಲ್ಲಿ ಇಂದು ಸಿಎಸ್ ಕೆ ವಿರುದ್ಧ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಅಭಿಮಾನಿಗಳಿಗೆ ನಿರಾಸೆಯೇ ಗತಿಯಾಗಿದೆ.
ಒಂದು ಕಾಲದ ಚಾಂಪಿಯನ್ ತಂಡಗಳಾದ ಮುಂಬೈ ಮತ್ತು ಸಿಎಸ್ ಕೆ ಎರಡೂ ಈಗ ಸೋಲಿನ ಸುಳಿಯಲ್ಲಿ ಒದ್ದಾಡುತ್ತಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರಾದ ಧೋನಿ ಮತ್ತು ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ಉಳಿದ ಸ್ಟಾರ್ ಗಳು ಹೇಳಿಕೊಳ್ಳುವ ಫಾರ್ಮ್ ನಲ್ಲಿಲ್ಲ.
ಇಂದಾದರೂ ರೋಹಿತ್ ಆಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಇಂದೂ ಅವರು ಅಲಭ್ಯರಾಗಿದ್ದಾರೆ. ಇನ್ನು, ಧೋನಿ ಕೂಡಾ ಇನ್ನೂ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅಲಭ್ಯರಾಗಿದ್ದಾರೆ. ಇದರಿಂದ ಅಭಿಮಾನಿಗಳಿಗೆ ನಿರಾಸೆಯೇ ಗತಿಯಾಗಿದೆ.
ಇತ್ತ ಮುಂಬೈ ಇಂಡಿಯನ್ಸ್ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಹೀನಾಯ ಸೋಲುಂಡಿದೆ. ಚೆನ್ನೈ ಕೂಡಾ ಕಳೆದ ಪಂದ್ಯದಲ್ಲಿ ಸೋತಿತ್ತು. ಹೀಗಾಗಿ ಎರಡೂ ತಂಡಗಳಿಗೆ ಇಂದು ಗೆಲುವು ಅನಿವಾರ್ಯವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ