Select Your Language

Notifications

webdunia
webdunia
webdunia
webdunia

IPL 2026: ಆರ್ ಸಿಬಿ ಇಂದು ಗುಜರಾತ್ ಸೋಲಿಸಿದರೆ ಜಾಕ್ ಪಾಟ್

RCB
ಅಹ್ಮದಾಬಾದ್: ಐಪಿಎಲ್ 2026 ರಲ್ಲಿ ಇಂದು ಆರ್ ಸಿಬಿ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯ ಗೆದ್ದರೆ ಆರ್ ಸಿಬಿ ಅದೃಷ್ಟ ಖುಲಾಯಿಸಲಿದೆ.

ಆರ್ ಸಿಬಿ ಇದುವರೆಗೆ ತವರಿನಲ್ಲಿ ಒಂದು ಮತ್ತು ಹೊರಗಿನ ತಾಣದಲ್ಲಿ ಒಂದು ಪಂದ್ಯ ಬಿಟ್ಟರೆ 8 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಸಾಧಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಸತತ ಎರಡು ಗೆಲುವು ಕಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ನೀಡಿದ ಪ್ರದರ್ಶನ ಎದುರಾಳಿಗಳ ಎದೆ ನಡುಗಿಸಿರುವುದು ಖಚಿತ.

ಇಂದು ಗುಜರಾತ್ ತಂಡವನ್ನು ಅಹ್ಮದಾಬಾದ್ ನಲ್ಲಿ ಎದುರಿಸಲಿದೆ. ಇದುವರೆಗೆ ಗುಜರಾತ್ ಸಾಧಾರಣ ಪ್ರದರ್ಶನ ನೀಡುತ್ತಾ ಬಂದಿದೆಯಷ್ಟೇ. ಅಂಕಪಟ್ಟಿಯಲ್ಲಿ ಸದ್ಯಕ್ಕೆ ಗುಜರಾತ್ ಐದನೇ ಸ್ಥಾನದಲ್ಲಿದೆ. ಇಂದಿನ ಪಂದ್ಯವನ್ನು ಆರ್ ಸಿಬಿ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಅದೃಷ್ಟ ಪಡೆಯಲಿದೆ.

ಈ ಪಂದ್ಯಕ್ಕೆ ಆರ್ ಸಿಬಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸುತ್ತಿರುವ ಆರ್ ಸಿಬಿ ಇಂದು ಗೆಲ್ಲುವ ನೆಚ್ಚಿನ ತಂಡವಾಗಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರೆಸ್ಸಿಂಗ್ ರೂಂನಲ್ಲಿ ಇ ಸಿಗರೇಟು ಸೇದಿ ಸಿಕ್ಕಿಬಿದ್ದ ರಾಜಸ್ತಾನ್ ರಾಯಲ್ಸ್ ಕ್ಯಾಪ್ಟನ್ ರಿಯಾನ್ ಪರಾಗ್ Video