Publish Date: Sun, 05 Apr 2026 (23:30 IST)
Updated Date: Sun, 05 Apr 2026 (23:33 IST)
ಬೆಂಗಳೂರು: ತವರು ನೆಲದಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ 43ರನ್‌ಗಳ ಅಮೋಘ ಜಯ ಗಳಿಸಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಬಳಿಕ ಬಂದ ದೇವದತ್ತ ಪಡಿಕ್ 51ರನ್, ಟಿಮ್ ಡೇವಿಡ್ 70ರನ್ ಹಾಗೂ ಕ್ಯಾಪ್ಟನ್ ರಜತ್ ಪಾಟಿದಾರ್48 ರನ್ ಗಳಿಸುವ ಮೂಲಕ ಆರ್‌ಸಿಬಿ 20ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 250ರನ್ ಗಳಿಸಿತು.
ಗುರಿ ಬೆನ್ನಟ್ಟುವ ಆರಂಭದಲ್ಲೇ ಸಂಜು ಸ್ಯಾಮ್ಸನ್ ಹಾಗೂ ರುತುರಾಜ್ ಗಾಯಕ್ವಾಡ್ ಬೇಗನೇ ಪೆವಿಲಿಯನ್ ಕಡೆ ಮುಖ ಮಾಡಿದ್ದರಿಂದ ಆರಂಭಿಕ ಆಘಾತವಾಯಿತು.
ನಂತರ ಬಂದ ಸರ್ಫರಾಜ್, ಪ್ರಶಾಂತ್ ವೀರ್ ಉತ್ತಮ ರನ್ ಗಳಿಸಿದರು, ಇನ್ನೇನು ಒಂದು ಎಸೆತವಿರುವಾಗ ಎಲ್ಲರೂ ಔಟ್ ಆಗುವ ಮೂಲಕ ಸಿಎಸ್‌ಕೆ 43 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು.