Publish Date: Sat, 04 Apr 2026 (09:27 IST)
Updated Date: Sat, 04 Apr 2026 (09:30 IST)
ಚೆನ್ನೈ: ಆರ್ ಸಿಬಿ ಇನ್ನೊಮ್ಮೆ ಕಪ್ ಗೆಲ್ಲಲು 72 ವರ್ಷ ಬೇಕಾಗಬಹುದು ಎನ್ನುವ ಮೂಲಕ ಅಂಬಟಿ ರಾಯುಡು ಹೊಟ್ಟೆ ಕಿಚ್ಚು ಇನ್ನೂ ನಿಂತಿಲ್ಲ ಎಂದು ಸಾಬೀತಪಡಿಸಿದ್ದಾರೆ.
ಕಳೆದ ಎರಡು ಸೀಸನ್ ಗಳಿಂದ ಸಿಎಸ್ ಕೆ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಆರ್ ಸಿಬಿ ವಿರುದ್ಧ ವ್ಯಂಗ್ಯದ ಮಾತುಗಳಿಂದ ಚುಚ್ಚುತ್ತಲೇ ಬಂದಿದ್ದಾರೆ. ಅವರ ಹೇಳಿಕೆಗಳು ಸಾಕಷ್ಟು ಟ್ರೋಲ್ ಗೊಳಗಾಗಿದೆ. ಕಳೆದ ಬಾರಿಯೂ ಆರ್ ಸಿಬಿ ಖಂಡಿತಾ ಕಪ್ ಗೆಲ್ಲಲ್ಲ ಎಂದಿದ್ದರು.
ಆದರೆ ಆರ್ ಸಿಬಿ ಕಳೆದ ಬಾರಿ ಚಾಂಪಿಯನ್ ಆಗಿತ್ತು. ಕೊನೆಗೆ ಆರ್ ಸಿಬಿ ಫ್ಯಾನ್ಸ್ ಕಾಟ ತಾಳಲಾರದೇ ಸೋಷಿಯಲ್ ಮೀಡಿಯಾದಲ್ಲಿ ಮುಖ ಮರೆಸುವಂತಹ ಪರಿಸ್ಥಿತಿ ಅಂಬಟಿ ರಾಯುಡುಗೆ ಎದುರಾಗಿತ್ತು. ಆದರೂ ಅವರ ಹೊಟ್ಟೆ ಕಿಚ್ಚು ನಿಂತಿಲ್ಲ. ಈ ಬಾರಿ ಮತ್ತೆ ಆರ್ ಸಿಬಿ ಮೇಲೆ ವ್ಯಂಗ್ಯದ ದಾಳಿ ನಡೆಸಿದ್ದಾರೆ.
ಆರ್ ಸಿಬಿ ಮೊದಲ ಟ್ರೋಫಿ ಗೆಲ್ಲಲು 18 ವರ್ಷ ತೆಗೆದುಕೊಂಡಿದೆ. ಈ ವೇಗದಲ್ಲಿ ಹೋದರೆ ಮುಂಬೈ ಇಂಡಿಯನ್ಸ್, ಸಿಎಸ್ ಕೆಯಂತೆ ಐದು ಟ್ರೋಫಿ ಗೆಲ್ಲಲು 72 ವರ್ಷ ಬೇಕಾಗಬಹುದು ಎಂದು ವ್ಯಂಗ್ಯ ಮಾಡಿದ್ದಾರೆ. ದೊಡ್ಡ ಪಂದ್ಯಗಳಲ್ಲಿ ಆರ್ ಸಿಬಿ ಒತ್ತಡಕ್ಕೆ ಒಳಗಾಗುತ್ತದೆ. ಆ ತಂಡಕ್ಕೆ ಒತ್ತಡ ನಿಭಾಯಿಸಲು ಬರಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.