Select Your Language

Notifications

webdunia
webdunia
webdunia
webdunia

ನನಗೂ ಐಪಿಎಲ್‌ ಟಿಕೆಟ್ ಬೇಡ, ಬೇರೆಯವರಿಗೂ ಕೊಡುವುದಿಲ್ಲ: ಸುರೇಶ್ ಕುಮಾರ್ ಗರಂ

BJP MLA Suresh Kumar
ಬೆಂಗಳೂರು: ಐಪಿಎಲ್ ಟಿಕೆಟ್ ಬೇಡವೆಂದಿರುವ ನಾನು ನನ್ನ ಟಿಕೆಟ್‌ ಅನ್ನು ಬೇರೆಯವರಿಗೆ ನೀಡಲು ಅನುಮತಿ ನೀಡುವುದಿಲ್ಲ ಎಂದು ಬಿಜೆಪಿ ಶಾಸಕ ಎಸ್‌ ಸುರೇಶ್ ಕುಮಾರ್ ಹೇಳಿದರು. 

ಐಪಿಎಲ್ ಟಿಕೆಟ್ ಕುರಿತ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ವಿಧಾನಸಭೆ ಸಭಾಧ್ಯಕ್ಷರಿಗೆ ಬರೆದಿರುವ ಪತ್ರವನ್ನು ಸುರೇಶ್‌ ಕುಮಾರ್‌ ಅವರು, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಿಧಾನ ಸಭೆಯ ಮಾನ್ಯ ಸಭಾಧ್ಯಕ್ಷರಿಗೆ ಐಪಿಎಲ್ ಟಿಕೆಟ್ ಕುರಿತ ನನ್ನ ನಿಲುವನ್ನು ಸ್ಪಷ್ಟ ಪಡಿಸಿ ಬರೆದಿರುವ ಪತ್ರವನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ.

ಏಕೆಂದರೆ ಟಿಕೆಟ್ ನಿರಾಕರಿಸಿರುವ ಶಾಸಕರ ಹೆಸರಿನ ಟಿಕೆಟ್ ಅಥವಾ ಪಾಸುಗಳನ್ನು ಬೇರೆಯವರು ಪಡೆಯುತ್ತಿರುವ ಮಾಹಿತಿ ನನಗೆ ದೊರಕಿದೆ. ಕಾಳ ಸಂತೆಯಲ್ಲೂ ಈ ರೀತಿಯ ಟಿಕೆಟ್ ಗಳು ಭಾರೀ ಮೊತ್ತಕ್ಕೆ ಬಿಕರಿಗಿವೆ ಎಂಬುದನ್ನು ಕೆಲ ಮಾಧ್ಯಮ ಸ್ನೇಹಿತರು ನನಗೆ ತಿಳಿಸಿದ್ದಾರೆ.

ಈ ಮೂಲಕ ಈ ಒಟ್ಟು ಐಪಿಎಲ್ ಟಿಕೆಟ್ ಕೊಡುವ ಕ್ರಮವನ್ನೇ ಪ್ರಶ್ನಿಸಿರುವ ನಾನು ಯಾವುದೇ ಕಾರಣಕ್ಕೂ ಟಿಕೆಟ್ ಬೇಡ ಎಂದು ತಿಳಿಸಿ, ನನ್ನ ಹೆಸರಿನಲ್ಲಿ ಈ ಟಿಕೆಟ್ ಗಳನ್ನು ಬೇರೆಯವರು ಪಡೆಯುವುದಕ್ಕೂ ನನ್ನ ಅನುಮತಿ ಇಲ್ಲ, ಒಂದೊಮ್ಮೆ ಈ ರೀತಿ ಪರಭಾರೆ ಮಾಡಿದರೆ ಅದಕ್ಕೆ ನನ್ನ ತೀವ್ರ ವಿರೋಧವಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ

Share this Story:

Follow Webdunia kannada

ಮುಂದಿನ ಸುದ್ದಿ

ಅವರು ಮಾಡಿರೋ ತೊಂದರೆ ಮುಚ್ಚಿಕೊಳ್ಳುತ್ತಿದ್ದಾರೆ: ಡಿಕೆ ಶಿವಕುಮಾರ್‌