ಬೆಂಗಳೂರು: ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದು ಕಿಂಗ್ ಎನ್ನೋದು ಹೆಸರಿಗೆ ಮಾತ್ರ ಎಂದಿದ್ದಾರೆ.
ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ನ್ನು ನೋಡಲೆಂದೇ ಸಾಕಷ್ಟು ಮಂದಿ ಮೈದಾನಕ್ಕೆ ಬಂದಿದ್ದರು. ತವರಿನ ಪ್ರೇಕ್ಷಕರ ಮುಂದೆ ಕೊಹ್ಲಿ ಸೆಂಚುರಿ ಹೊಡೀತಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು.
ಆದರೆ ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಒಟ್ಟು 6 ಎಸೆತ ಎದುರಿಸಿದ ಕೊಹ್ಲಿ ಕೇವಲ 7 ರನ್ ಗಳಿಸಿ ಔಟಾಗಿದ್ದಾರೆ. ಕಳೆದ ಪಂದ್ಯದಲ್ಲೂ ಅವರು ನಿಧಾನಗತಿಯಲ್ಲಿ ಆಡಿ 31 ರನ್ ಗಳಿಸಿದ್ದರು.
ಕೊಹ್ಲಿ ಮೊದಲ ಪಂದ್ಯದಲ್ಲಿ ಮಾತ್ರ ಮಿಂಚಿದ್ದರು. ಆದರೆ ಉಳಿದ ಎರಡೂ ಪಂದ್ಯಗಳಲ್ಲಿ ವಿಫಲರಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಯಾಕೋ ಕೊಹ್ಲಿ ಬ್ಯಾಟಿಂಗ್ ನಲ್ಲಿ ಮೊದಲಿ ಝಲಕ್ ಕಾಣುತ್ತಿಲ್ಲ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.