Webdunia - Bharat's app for daily news and videos

Install App

IPL 2025 RCBvsDC: ಫಿಲಿಪ್ ಸಾಲ್ಟ್ ಬದಲು ನೀವೇ ಔಟಾಗಬಹುದಿತ್ತು: ಕೊಹ್ಲಿ ಮೇಲೆ ಫ್ಯಾನ್ಸ್ ಸಿಟ್ಟು

Krishnaveni K
ಗುರುವಾರ, 10 ಏಪ್ರಿಲ್ 2025 (20:24 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2025 ರ ಇಂದಿನ ಆರ್ ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಹೊಡೆಬಡಿಯ ಆರಂಭ ನೀಡಿದ್ದ ಫಿಲಿಪ್ ಸಾಲ್ಟ್ ರನೌಟ್ ಆಗಿದ್ದಕ್ಕೆ ಅಭಿಮಾನಿಗಳು ವಿರಾಟ್ ಕೊಹ್ಲಿ ಮೇಲೆ ಸಿಟ್ಟು ಹೊರಹಾಕಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆರ್ ಸಿಬಿಗೆ ಫಿಲಿಪ್ ಸಾಲ್ಟ್ ಉತ್ತಮ ಆರಂಭ ನೀಡಿದ್ದರು. ತಂಡ 5 ಓವರ್ ಗಳಲ್ಲೇ ವಿಕೆಟ್ ನಷ್ಟವಿಲ್ಲದೇ 50 ರನ್ ದಾಟಿತ್ತು. ಸಾಲ್ಟ್ 17 ಎಸೆತಗಳಿಂದ 3 ಸಿಕ್ಸರ್ ಸಹಿತ 37 ರನ್ ಮಾಡಿದ್ದರು.

ಈ ವೇಳೆ ಕವರ್ಸ್ ಕಡೆಗೆ ಚೆಂಡು ಹೊಡೆದ ಫಿಲಿಪ್ ಸಾಲ್ಟ್ ರನ್ ಗಾಗಿ ಓಡಿದ್ದರು. ಅವರಿಗಿಂತ ಮೊದಲೇ ಕೊಹ್ಲಿ ಕೂಡಾ ಓಡಿ ಮಧ್ಯದ ಪಿಚ್ ವರೆಗೆ ತಲುಪಿದ್ದರು. ಈ ವೇಳೆ ಕೊಹ್ಲಿ ಬೇಗನೇ ಓಡಿ ನಾನ್ ಸ್ಟ್ರೈಕರ್ ಎಂಡ್ ತಲುಪಿ ಬಚಾವ್ ಮಾಡಿಕೊಂಡಿದ್ದರು. ಆದರೆ ಸಾಲ್ಟ್ ರನೌಟ್ ಆದರು.

ಈ ರನೌಟ್ ಗೆ ಅಭಿಮಾನಿಗಳು ಕೊಹ್ಲಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಹೇಗೂ ಕೊಹ್ಲಿ ರನ್ ಗಳಿಸಲು ಪರದಾಡುತ್ತಿದ್ದರು. ಸಾಲ್ಟ್ ಗಾಗಿ ತಮ್ಮ ವಿಕೆಟ್ ನ್ನೇ ಅವರು ಬಲಿ ಕೊಡಬಹುದಿತ್ತು. ಆದರೆ ಅವರು ತಮ್ಮ ವಿಕೆಟ್ ಉಳಿಸುವ ಮೂಲಕ ತಮ್ಮ ತವರು ಡೆಲ್ಲಿ ತಂಡಕ್ಕೆ ಉಪಕಾರ ಮಾಡಿದರು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

Virat Kohli: ನೀವೇ ಕರೆಸಿ ಜಾತ್ರೆ ಮಾಡಿ ಈಗ ವಿರಾಟ್ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ

Vijay Mallya: ನಾನೇನಾದ್ರೂ ಆರ್ ಸಿಬಿಯಲ್ಲಿ ಇದ್ದಿದ್ರೆ ಕೆಎಲ್ ರಾಹುಲ್..: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ

Arrest Kohli: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿ ಹ್ಯಾಶ್‌ಟ್ಯಾಗ್‌

ಮುಂದಿನ ಸುದ್ದಿ
Show comments