ಚೆನ್ನೈ: ಐಪಿಎಲ್ 2025 ರಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೋಸದಾಟವಾಡಿತಾ? ಹೀಗೊಂದು ಅನುಮಾನಗಳಿಗೆ ಕಾರಣವಾಗಿದೆ ಈ ವಿಡಿಯೋ.
ಮುಂಬೈ ವಿರುದ್ಧದ ಪಂದ್ಯವನ್ನು ಚೆನ್ನೈ 4 ವಿಕೆಟ್ ಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಆದರೆ ಫೀಲ್ಡಿಂಗ್ ವೇಳೆ ಋತುರಾಜ್ ಗಾಯಕ್ ವಾಡ್ ಪಡೆ ಚೆಂಡು ವಿರೂಪಗೊಳಿಸಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಇದಕ್ಕೆ ತಕ್ಕ ವಿಡಿಯೋವೊಂದೂ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚೆನ್ನೈ ತಂಡ ಫೀಲ್ಡಿಂಗ್ ವೇಳೆ ನಾಯಕ ಋತುರಾಜ್ ಗಾಯಕ್ ವಾಡ್ ಬೌಲರ್ ಖಲೀಲ್ ಅಹ್ಮದ್ ಬಳಿ ತೆರಳಿ ಏನೋ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಾರೆ. ಖಲೀಲ್ ಅಹ್ಮದ್ ಪ್ಯಾಟ್ ಜೇಬಿನಿಂದ ಏನನ್ನೋ ತೆಗೆದು ಚೆಂಡಿಗೆ ಬಳಸುವಂತೆ ಕಾಣಿಸುತ್ತಿದೆ.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಎಸ್ ಕೆ ಮೋಸದಾಟವಾಡಿದೆ ಎಂದು ಹಲವರು ಆರೋಪಿಸಿದ್ದಾರೆ. ಈ ಹಿಂದೆ ಮ್ಯಾಚ್ ಫಿಕ್ಸಿಂಗ್ ಕಾರಣಕ್ಕೆ ಸಿಎಸ್ ಕೆ ಎರಡು ವರ್ಷ ಐಪಿಎಲ್ ನಿಂದ ನಿಷೇಧಕ್ಕೊಳಗಾಗಿತ್ತು.