ಐಪಿಎಲ್ 2025: ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟು ರಿಷಬ್ ಪಂತ್ ಈ ತಂಡದ ಪಾಲಾಗುವುದು ಬಹುತೇಕ ಕನ್ ಫರ್ಮ್

Krishnaveni K
ಶನಿವಾರ, 20 ಜುಲೈ 2024 (15:05 IST)
Photo Credit: Facebook
ದೆಹಲಿ: ಐಪಿಎಲ್ 2025 ರ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಹಲವು ಆಟಗಾರರು ಯಾವೆಲ್ಲಾ ತಂಡಗಳು ಸೇರಿಕೊಳ್ಳಬಹುದು ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಇದೀಗ ರಿಷಬ್ ಪಂತ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತೊರೆಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ರಿಷಬ್ ಪಂತ್ 2021 ರಿಂದ ಡೆಲ್ಲಿ ತಂಡದ ನಾಯಕರಾಗಿದ್ದಾರೆ. ಆದರೆ ಇದುವರೆಗೆ ಅವರ ನಾಯಕತ್ವದಲ್ಲಿ ತಂಡ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರನ್ನು ಈ ಬಾರಿ ರಿಲೀಸ್ ಮಾಡಲು ಡೆಲ್ಲಿ ಫ್ರಾಂಚೈಸಿ ಮುಂದಾಗಿದೆ. ಹೀಗಾಗಿ ಮುಂದೆ ಯಾವ ತಂಡ ಕೂಡಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

ಮೂಲಗಳ ಪ್ರಕಾರ ರಿಷಬ್ ಪಂತ್ ರನ್ನು ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಗೆ ಮಾತುಕತೆ ನಡೆಸಿದೆಯಂತೆ. ರಿಷಬ್ ಕೂಡಾ ಚೆನ್ನೈ ತಂಡ ಸೇರಿಕೊಳ್ಳಲು ಒಪ್ಪಿದ್ದಾರೆ ಎನ್ನಲಾಗಿದೆ. ಹೇಗಿದ್ದರೂ ಧೋನಿ ಮುಂದಿನ ಆವೃತ್ತಿಯಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವುದು ಅನುಮಾನ. ಹೀಗಾಗಿ ಒಬ್ಬ ಪ್ರಬಲ ವಿಕೆಟ್ ಕೀಪರ್ ಬ್ಯಾಟಿಗನಿಗಾಗಿ ಚೆನ್ನೈ ಹುಡುಕಾಟ ನಡೆಸುತ್ತಿದೆ.

ಹೀಗಾಗಿ ಧೋನಿಗೆ ಆಪ್ತರಾಗಿರುವ ರಿಷಬ್ ಗೇ ಗಾಳ ಹಾಕುತ್ತಿದೆ ಎನ್ನಲಾಗಿದೆ. ಸದ್ಯಕ್ಕೆ ಚೆನ್ನೈ ತಂಡಕ್ಕೆ  ಋತುರಾಜ್ ಗಾಯಕ್ ವಾಡ್ ನಾಯಕರಾಗಿದ್ದಾರೆ. ರಿಷಬ್ ಇದುವರೆಗೆ ಚೆನ್ನೈ ನಾಯಕತ್ವಕ್ಕೆ ಬೇಡಿಕೆಯಿಟ್ಟಿಲ್ಲ. ಏನೇ ಆದರೂ ಇದೀಗ ಡೆಲ್ಲಿ ಫ್ರಾಂಚೈಸಿ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒಬ್ಬರನ್ನೊಬ್ಬರು ನೋಡಿ ಎಂಥಾ ಖುಷಿ ವಿಡಿಯೋ ನೋಡಿ

ಕೊಹ್ಲಿ, ರೋಹಿತ್ ಆಡುವ ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ ಲೈವ್ ಎಲ್ಲಿ ನೋಡಬೇಕು

ಫಿಟ್ ಆಗಿದ್ರೂ ನನ್ನ ಯಾಕೆ ಕಡೆಗಣಿಸ್ತಿದ್ದೀರಿ: ಆಯ್ಕೆ ಸಮಿತಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೊಹಮ್ಮದ್ ಶಮಿ

ಬೆಳ್ಳಂ ಬೆಳಿಗ್ಗೆ ಆಸ್ಟ್ರೇಲಿಯಾಗೆ ಹೊರಟ ರೋಹಿತ್ ಶರ್ಮಾ, ಕೊಹ್ಲಿ: ಬೀಳ್ಕೊಡಲು ಬಂದ ಫ್ಯಾನ್ಸ್ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments