Webdunia - Bharat's app for daily news and videos

Install App

IPL 2025 Auction: ಕನ್ನಡಿಗ ಆಟಗಾರರಿಗೆ ಬಿಡ್ಡಿಂಗ್ ಮಾಡಲು ಆರ್ ಸಿಬಿಗೆ ಆಸಕ್ತಿಯೇ ಇಲ್ಲ

Krishnaveni K
ಸೋಮವಾರ, 25 ನವೆಂಬರ್ 2024 (09:30 IST)
Photo Credit: X
ಬೆಂಗಳೂರು: ಐಪಿಎಲ್ 2025 ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ಕನ್ನಡಿಗ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಡೆಗಣಿಸಿದೆ. ಕನ್ನಡಿಗ ಆಟಗಾರರ ಹೆಸರು ಬಂದರೆ ಬಿಡ್ಡಿಂಗ್ ಮಾಡಲು ಆಸಕ್ತಿಯೇ ತೋರಿಸದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಹರಾಜಿಗೆ ಬಂದಿದ್ದರು. ಆದರೆ ಇಬ್ಬರನ್ನೂ ಆರ್ ಸಿಬಿ ಖರೀದಿಸಿಲ್ಲ. ಅದರಲ್ಲೂ ಪ್ರಸಿದ್ಧ ಕೃಷ್ಣಗೆ ಬಿಡ್ಡಿಂಗ್ ಮಾಡಲೂ ಆಸಕ್ತಿ ತೋರಲಿಲ್ಲ. ವಿಶೇಷವೆಂದರೆ ಪ್ರಸಿದ್ಧ ಕೃಷ್ಣ ಹೆಸರು ಬಂದಾಗ ರಾಹುಲ್ ದ್ರಾವಿಡ್ ಕೋಚ್ ಆಗಿರುವ ರಾಜಸ್ಥಾನ್ ತಂಡ ಬಿಡ್ಡಿಂಗ್ ಮಾಡಿತು.

ಆದರೆ ಅಂತಿಮವಾಗಿ ಅವರು ಗುಜರಾತ್ ಟೈಟನ್ಸ್ ತಂಡಕ್ಕೆ 9 ಕೋಟಿ ರೂ.ಗೆ ಬಿಕರಿಯಾದರು. ಅವರ ಮೂಲ ಬೆಲೆ 2 ಕೋಟಿ ರೂ.ಗಳಷ್ಟಾಗಿತ್ತು. ಆರ್ ಸಿಬಿಯಲ್ಲಿ ಸ್ಥಳೀಯ ಆಟಗಾರರಿಲ್ಲ ಎಂಬ ಕೊರಗು ಇಲ್ಲಿನ ಅಭಿಮಾನಿಗಳಿತ್ತು. ಈ ಬಾರಿ ಹರಾಜಿನಲ್ಲಾದರೂ ಆ ಕೊರತೆ ನೀಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು.

ಇದುವರೆಗೆ ಕಪ್ ಗೆಲ್ಲದೇ ಇದ್ದರೂ ಆರ್ ಸಿಬಿ ತಂಡಕ್ಕೆ ಇರುವಷ್ಟು ಅಭಿಮಾನಿಗಳು ಬೇರೆ ಯಾವ ತಂಡಕ್ಕೂ ಇಲ್ಲ. ನಮ್ಮ ಕನ್ನಡಿಗ ಆಟಗಾರರಿಗೆ ಅವಕಾಶ ನೀಡಿ ಎಂದು ಹಲವು ವರ್ಷಗಳಿಂದಲೂ ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಅಭಿಮಾನಿಗಳ ಬಯಕೆಗೆ ಈ ಬಾರಿಯೂ ಆರ್ ಸಿಬಿ ಮ್ಯಾನೇಜ್ ಮೆಂಟ್ ತಣ್ಣೀರೆರಚಿದೆ. 83 ಕೋಟಿ ರೂ.ಗಳಷ್ಟು ಹಣವಿದ್ದರೂ ಸರಿಯಾದ ಆಟಗಾರರನ್ನು ಖರೀದಿಸುವಲ್ಲಿ ಈ ಬಾರಿಯೂ ಆರ್ ಸಿಬಿ ಎಡವಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments