Webdunia - Bharat's app for daily news and videos

Install App

ಐಪಿಎಲ್ 2024: ಟಿ20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ವಿಶ್ವ ದಾಖಲೆ

Krishnaveni K
ಸೋಮವಾರ, 15 ಏಪ್ರಿಲ್ 2024 (09:01 IST)
Photo Courtesy: Twitter
ಮುಂಬೈ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟಿಗ ಟಿ20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. 105 ರನ್ ಗಳ ಅಜೇಯ ಇನಿಂಗ್ಸ್ ಆಡಿದ ರೋಹಿತ್ 5 ಸಿಕ್ಸರ್ ಕೂಡಾ ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ 500 ಸಿಕ್ಸರ್ ಗಳ ದಾಖಲೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ 5 ನೇ ಆಟಗಾರ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ 1056 ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಕೀರನ್ ಪೊಲ್ಲಾರ್ಡ್ 860 ಸಿಕ್ಸರ್ ಸಿಡಿಸಿ ದ್ವಿತೀಯ, 678 ಸಿಕ್ಸರ್ ಸಿಡಿಸಿದ ಆಂಡ್ರೆ ರಸೆಲ್, ಕಾಲಿನ್ ಮನ್ರೋ 548 ಸಿಕ್ಸರ್ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ. ರೋಹಿತ್ ಈ ದಾಖಲೆ ಮಾಡಿದ ಪ್ರಥಮ ಭಾರತೀಯ.

ನಿನ್ನೆ ರೋಹಿತ್ 11 ಬೌಂಡರಿ ಕೂಡಾ ಹೊಡೆದಿದ್ದರು. ಟಿ20 ಕ್ರಿಕೆಟ್ ನಲ್ಲಿ 1000 ಬೌಂಡರಿ ಮತ್ತು 500 ಸಿಕ್ಸರ್ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ರೋಹಿತ್ ಗೆ ಮೊದಲು ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ ಎಂದರೆ ಕ್ರಿಸ್ ಗೇಲ್ ಮಾತ್ರ. ಆದರೆ ರೋಹಿತ್ ಶರ್ಮಾ ಶತಕದ ಹೊರತಾಗಿಯೂ ಮುಂಬೈ ಪಂದ್ಯ ಸೋತಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

ಮುಂದಿನ ಸುದ್ದಿ
Show comments