Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವೆ ಇಂದು ರೋಮಾಂಚಕಾರಿ ಪಂದ್ಯ

Virat Kohli

Krishnaveni K

ಮುಂಬೈ , ಗುರುವಾರ, 11 ಏಪ್ರಿಲ್ 2024 (09:40 IST)
ಮುಂಬೈ: ಐಪಿಎಲ್ 2024 ರಲ್ಲಿ ಇಂದು ಮಹತ್ವದ ಪಂದ್ಯವೊಂದು ನಡೆಯಲಿದೆ. ಐಪಿಎಲ್ ಅಭಿಮಾನಿಗಳು ಎದಿರು ನೋಡುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವಿನ ಪಂದ್ಯ ಇಂದು ಮುಂಬೈನಲ್ಲಿ ನಡೆಯುತ್ತಿದೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಜಯ ಗಳಿಸಿತ್ತು. ಹೀಗಾಗಿ ಆ ಗೆಲುವು ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ. ಅದರಲ್ಲೂ ಮುಂಬೈ ಬ್ಯಾಟಿಂಗ್ ಭರ್ಜರಿ ಕ್ಲಿಕ್ ಆಗಿತ್ತು. ಆದರೆ ಬೌಲಿಂಗ್ ಮಾತ್ರ ಇನ್ನೂ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವುದೇ ಕೊರತೆಯಾಗಿದೆ.

ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾಕೋ ಈ ಬಾರಿ ಗೆಲ್ಲುವ ಉತ್ಸಾಹವೇ ಕಳೆದುಕೊಂಡಂತೆ ಆಡುತ್ತಿದೆ. ವಿರಾಟ್ ಕೊಹ್ಲಿ ಬಿಟ್ಟು ಉಳಿದ ಬ್ಯಾಟಿಗರಿಂದ ಹೇಳಿಕೊಳ್ಳುವ ಪ್ರದರ್ಶನವೇ ಬಂದಿಲ್ಲ. ಬೌಲಿಂಗ್ ಕೂಡಾ ಸಂಪೂರ್ಣವಾಗಿ ಹಳಿ ತಪ್ಪಿದೆ.

ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಸೋತಿರುವ ಆರ್ ಸಿಬಿ ಫಾರ್ಮ್ ಬಗ್ಗೆ ಅಭಿಮಾನಿಗಳೇ ಹಿಡಿಶಾಪ ಹಾಕುತ್ತಿದ್ದಾರೆ. ಇದುವರೆಗೆ ಆಡಿದ 5 ಪಂದ್ಯಗಳಲ್ಲಿ ಆರ್ ಸಿಬಿಗೆ ದಕ್ಕಿದ್ದು ಕೇವಲ 1 ಗೆಲುವು. ವಾಂಖೆಡೆ ಮೈದಾನ ಮುಂಬೈಗೆ ತವರು ಅಂಕಣ. ಇಲ್ಲಿ ಮುಂಬೈ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ. ಆದರೆ ಸದ್ಯಕ್ಕೆ ಆರ್ ಸಿಬಿ ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕೆ ಕುಸಿದಿದ್ದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ರೋಹಿತ್ ಶರ್ಮಾ ನಮಗೆ ಬೇಕು ಎಂದು ಕ್ಯೂ ನಿಂತಿರುವ ತಂಡಗಳು ಯಾವೆಲ್ಲಾ ನೋಡಿ!