Select Your Language

Notifications

webdunia
webdunia
webdunia
webdunia

ಐಪಿಎಲ್ 2024: ರೋಹಿತ್ ಶರ್ಮಾ ಶತಕ ವ್ಯರ್ಥ, ಪಥಿರಾನ ಬೌಲಿಂಗ್ ಗೆ ಸೋತ ಮುಂಬೈ ಇಂಡಿಯನ್ಸ್

Rohit Sharma

Krishnaveni K

ಮುಂಬೈ , ಸೋಮವಾರ, 15 ಏಪ್ರಿಲ್ 2024 (08:22 IST)
Photo Courtesy: Twitter
ಮುಂಬೈ: ಐಪಿಎಲ್ 2024 ರಲ್ಲಿ ಸಿಎಸ್ ಕೆ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಶತಕದ ಹೊರತಾಗಿಯೂ 20 ರನ್ ಗಳ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ನಾಯಕ ಋತುರಾಜ್ ಗಾಯಕ್ ವಾಡ್ 40 ಎಸೆತಗಳಿಂದ 69, ಶಿವಂ ದುಬೆ 38 ಎಸೆತಗಳಿಂದ ಅಜೇಯ 66 ರನ್ ಸಿಡಿಸಿದರು. ಆದರೆ ಕೊನೆಯಲ್ಲಿ ಬಂದ ಧೋನಿ ಕೇವಲ 4 ಎಸೆತಗಳಿಂದ 3 ಭರ್ಜರಿ ಸಿಕ್ಸರ್ ಸೇರಿದಂತೆ 20 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಬಹುಶಃ ಧೋನಿ ನಿನ್ನೆ ಸಿಡಿಯದೇ ಇದ್ದಿದ್ದರೆ ಮುಂಬೈ ಗೆಲುವು ಕಾಣುತ್ತಿತ್ತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ ಆರಂಭ ಉತ್ತಮವಾಗಿಯೇ ಇತ್ತು. ಇಶಾನ್ ಕಿಶನ್ 23 ರನ್ ಗಳಿಸಿದರು. ಅವರ ಹಿಂದೆಯೇ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದ್ದು ಮುಂಬೈಗೆ ಹೊಡೆತ ನೀಡಿತು. ಈ ನಡುವೆ ತಿಲಕ್ ವರ್ಮ 31 ರನ್ ಸಿಡಿಸಿದರು. ಆದರೆ ಮುಂಬೈ ಬ್ಯಾಟಿಗರಿಗೆ ನಿಂತು ಆಡಲು ಸಿಎಸ್ ಕೆ ಬೌಲರ್ ಗಳು ಅವಕಾಶ ಕೊಡಲೇ ಇಲ್ಲ. ಅದರಲ್ಲೂ ವಿಶೇಷವಾಗಿ ಪಥಿರಾಣ ಡೆತ್ ಓವರ್ ನಲ್ಲಿ ಅದ್ಭುತ ಬೌಲಿಂಗ್ ನಡೆಸಿದರು. ಒಟ್ಟು 4 ಓವರ್ ಎಸೆದ ಅವರು 28 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಆದರೆ ಇನ್ನೊಂದೆಡೆ ಗಟ್ಟಿಯಾಗಿ ನಿಂತು ತಮ್ಮ ಹಿಟ್ ಮ್ಯಾನ್ ಅವತಾರ ತೋರಿಸಿದ್ದ ರೋಹಿತ್ ಶರ್ಮಾ 63 ಎಸೆತಗಳಿಂದ 5 ಸಿಕ್ಸರ್ ಸಹಿತ 105 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು. ಆದರೆ ಅವರಿಗೆ ತಕ್ಕ ಸಾಥ‍್ ಸಿಗದ ಕಾರಣ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಹೈವೋಲ್ಟ್‌ಜ್ ಪಂದ್ಯ ಶುರು: ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ