Webdunia - Bharat's app for daily news and videos

Install App

ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಝಾಡಿಸಿದ ಆರ್ ಸಿಬಿ ಫ್ಯಾನ್ಸ್!

Krishnaveni K
ಗುರುವಾರ, 23 ಮೇ 2024 (13:08 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಗ್ಲೆನ್ ಮ್ಯಾಕ್ಸ್ ವೆಲ್ ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳಪೆ ಪ್ರದರ್ಶನ ನೀಡಿದ ಮ್ಯಾಕ್ಸ್ ವೆಲ್ ರನ್ನು ಕಟ್ಟಿ ಹಾಕಿ ಅಭಿಮಾನಿಗಳು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ!

ಆದರೆ ಇದೆಲ್ಲಾ ನಡೆದಿರುವುದು ರಿಯಲ್ ಆಗಿಲ್ಲ, ರೀಲ್ಸ್, ಮೆಮೆಗಳಲ್ಲಿ. ಗ್ಲೆನ್ ಮ್ಯಾಕ್ಸ್ ವೆಲ್ ನಿನ್ನೆಯ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ನಿರ್ಗಮಿಸಿದ್ದರು. ಇದರೊಂದಿಗೆ ಈ ಐಪಿಎಲ್ ನುದ್ದಕ್ಕೂ ತಮ್ಮ ಕೆಟ್ಟ ಫಾರ್ಮ್ ನ್ನು ಮತ್ತೆ ಮುಂದುವರಿಸಿದರು. ಆರ್ ಸಿಬಿಯ ಪ್ರಮುಖ ಬ್ಯಾಟಿಗನಾಗಿರುವ ಮ್ಯಾಕ್ಸ್ ವೆಲ್ ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ಕೈಕೊಟ್ಟಿದ್ದು ಅಭಿಮಾನಿಗಳ ಸಹನೆಯ ಕಟ್ಟೆಯೊಡೆದಿತ್ತು.

ಹೀಗಾಗಿ ಮ್ಯಾಕ್ಸ್ ವೆಲ್ ರನ್ನು ಕಟ್ಟಿ ಹಾಕಿ ಹೊಡೆಯುವಂತೆ, ಇಲ್ಲವೇ ಅಟ್ಟಾಡಿಸಿ ನಾಲ್ಕೈದು ಜನ ಹೊಡೆಯುವಂತಹ ಮೆಮೆಗಳನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ತೀರಿಸಿಕೊಂಡಿದ್ದಾರೆ. ಈ ಟೂರ್ನಿಯುದ್ದಕ್ಕೂ ಮ್ಯಾಕ್ಸ್ ವೆಲ್ ಆಟಕ್ಕುಂಟು ಲೆಕ್ಕಕ್ಕಿಲ್ಲದ ಆಟಗಾರನಾಗಿದ್ದರು.

ಒಬ್ಬ ಸ್ಟಾರ್ ಆಟಗಾರನಾಗಿದ್ದುಕೊಂಡು ಏಕಾಂಗಿಯಾಗಿ ಪಂದ್ಯ ಮುನ್ನಡೆಸಬಲ್ಲ ಸಾಮರ್ಥ್ಯವುಳ‍್ಳ ಆಟಗಾರನಾಗಿದ್ದುಕೊಂಡು ಮ್ಯಾಕ್ಸ್ ವೆಲ್ ಇಷ್ಟು ಹೀನಾಯವಾಗಿ ಆಡಿದ್ದು ಅಭಿಮಾನಿಗಳ ಆಕ್ರೋಶ ಮೇರೆ ಮೀರಿತ್ತು. ಹೀಗಾಗಿಯೇ ಸೋಷಿಯಲ್ ಮೀಡಿಯಾ ಮೂಲಕ ಸೇಡು ತೀರಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹಮ್ಮದ್ ಶಮಿಯನ್ನು ಟೀಂ ಇಂಡಿಯಾಕ್ಕೆ ಯಾಕೆ ಆಯ್ಕೆ ಮಾಡ್ತಿಲ್ಲ: ಶಾಕಿಂಗ್ ಹೇಳಿಕೆ ನೀಡಿದ ವೇಗಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಸ್ಪಷ್ಟನೆ ಕೇಳಿದ ಬೆನ್ನಲ್ಲೇ ಐಪಿಎಲ್‌ಗೆ ರವಿಚಂದ್ರನ್‌ ಅಶ್ವಿನ್ ಗುಡ್‌ಬೈ

ಪಿಟಿ ಉಷಾ ಮಗನ ಮದುವೆ ಊಟಕ್ಕೆ ಫಿದಾ ಆದ ಮೇರಿ ಕೋಮ್‌

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಮುಂದಿನ ಸುದ್ದಿ
Show comments