IPL 2024: ಆರ್ ಸಿಬಿ ಸೋತಿದ್ದಕ್ಕೆ ಸಿಎಸ್ ಕೆ ಆಟಗಾರ ತುಷಾರ್ ಪಾಂಡೆ, ಫ್ಯಾನ್ಸ್ ಸಂಭ್ರಮ

Krishnaveni K
ಗುರುವಾರ, 23 ಮೇ 2024 (11:13 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ ನಲ್ಲಿ ಆರ್ ಸಿಬಿ ಮತ್ತು ಸಿಎಸ್ ಕೆ ನಡುವಿನ ವೈರತ್ವ ಮತ್ತೆ ಮುಂದುವರಿದಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ ಕೆ ತಂಡವನ್ನು ಸೋಲಿಸಿದ್ದು ಆ ತಂಡದ ಫ್ಯಾನ್ಸ್, ಕ್ರಿಕೆಟಿಗರ ಹೊಟ್ಟೆ ಉರಿಸಿತ್ತು.

ಆರ್ ಸಿಬಿ ವಿರುದ್ಧ ಕೊನೆಯ ಪಂದ್ಯ ಸೋತಿದ್ದರಿಂದ ಸಿಎಸ್ ಕೆಗೆ ಪ್ಲೇ ಆಫ್ ಅವಕಾಶ ಕೈತಪ್ಪಿ ಹೋಯ್ತು. ಅಲ್ಲದೆ, ಆ ಪಂದ್ಯ ಮುಗಿದ ಬಳಿಕ  ಆರ್ ಸಿಬಿ ಆಟಗಾರರು ಸಂಭ್ರಮಿಸಿದ ರೀತಿ ಸಿಎಸ್ ಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನೇ ತಲೆಯಲ್ಲಿಟ್ಟುಕೊಂಡು ಈಗ ಆರ್ ಸಿಬಿ ಪ್ಲೇ ಆಫ್ ನಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಕ್ಕೆ ಸಿಎಸ್ ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ.

ಕೇವಲ ಫ್ಯಾನ್ಸ್ ಮಾತ್ರವಲ್ಲ, ಸಿಎಸ್ ಕೆ ಆಟಗಾರ ತುಷಾರ್ ದೇಶಪಾಂಡೆ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಬೆಂಗಳೂರು ತಂಡವನ್ನು ಹಂಗಿಸುವಂತಹ ಪೋಸ್ಟ್ ಒಂದನ್ನು ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಬಳಿಕ ಇದು ವಿವಾದವಾಗುತ್ತಿದ್ದಂತೇ ಡಿಲೀಟ್ ಮಾಡಿದ್ದಾರೆ.

ಇನ್ನು ಸಿಎಸ್ ಕೆ ಫ್ಯಾನ್ಸ್, ಸೋಷಿಯಲ್ ಮೀಡಿಯಾದಲ್ಲಿ ಆರ್ ಸಿಬಿಯನ್ನು ಹೇಡಿಗಳು, ಲೂಸರ್ ಗಳು ಎಂದು ಲೇವಡಿ ಮಾಡಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ, ಆರ್ ಸಿಬಿ ಬಗ್ಗೆ ಮೆಮೆಗಳನ್ನು ಮಾಡಿ ಕಾಲೆಳೆದಿದ್ದಾರೆ. ಸಾಮಾನ್ಯವಾಗಿ ಆರ್ ಸಿಬಿ ಮತ್ತು ಸಿಎಸ್ ಕೆ ಫ್ಯಾನ್ಸ್ ನಡುವೆ ಈ ರೀತಿಯ ಗುದ್ದಾಟಗಳು ಸಾಮಾನ್ಯ. ಆದರೆ ಈ ಬಾರಿ ಸಿಎಸ್ ಕೆಯನ್ನು ಆರ್ ಸಿಬಿ ಟೂರ್ನಿಯಂದ ಹೊರಹಾಕಿದ್ದಕ್ಕೆ ಈ ಸಮರ ಮತ್ತಷ್ಟು ಹೆಚ್ಚಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

ಮುಂದಿನ ಸುದ್ದಿ
Show comments