ಐಪಿಎಲ್ 2024: ಧೋನಿ ಅಭಿಮಾನಿಗಳ ಕೀಟಲೆ ಮಾಡಿದ ರವೀಂದ್ರ ಜಡೇಜಾ

Krishnaveni K
ಮಂಗಳವಾರ, 9 ಏಪ್ರಿಲ್ 2024 (12:50 IST)
Photo Courtesy: BCCI
ಚೆನ್ನೈ: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ಮಾಜಿ ನಾಯಕ ಧೋನಿ ಕ್ರೀಸ್ ಬರಲು ಹೊರಟಾಗ ಆಲ್ ರೌಂಡರ್ ರವೀಂದ್ರ ಜಡೇಜಾ ಅಭಿಮಾನಿಗಳನ್ನು ಕೀಟಲೆ ಮಾಡಿ ಗಮನ ಸೆಳೆಸಿದ್ದಾರೆ.

ಶಿವಂ ದುಬೆ ವಿಕೆಟ್ ಬಿದ್ದಾಗ ಧೋನಿ ಕ್ರೀಸ್ ಗೆ ಬರಬೇಕಾಗಿತ್ತು. ಧೋನಿ ಆಗಮನಕ್ಕಾಗಿ ಮೈದಾನದಲ್ಲಿ ಪ್ರೇಕ್ಷಕರು ಜೋರಾಗಿ ಅವರ ಹೆಸರೆತ್ತಿ ಕರೆದು ಚಿಯರ್ ಮಾಡಲು ಶುರು ಮಾಡಿದ್ದರು. ಆದರೆ ಧೋನಿ ಅಭಿಮಾನಿಗಳಿಗೆ ಚಮಕ್ ಕೊಡಲು ಬೇಕೆಂದೇ ಜಡೇಜಾ ತಾವೇ ಧೋನಿಗಿಂತ ಮೊದಲು ಕ್ರೀಸ್ ಗೆ ಬರುವವರಂತೆ ನಟಿಸಿ ಕೀಟಲೆ ಮಾಡಿದರು.

ಧೋನಿ ಬದಲು ಜಡೇಜಾ ಕ್ರೀಸ್ ಗೆ ಬರಲು ಹೊರಟಿದ್ದು ನೋಡಿ ಅಭಿಮಾನಿಗಳು ಕೆಲ ಕ್ಷಣ ದಂಗಾದರು. ಆದರೆ ಮತ್ತೊಂದು ತುದಿಯಲ್ಲಿ ಧೋನಿ ಗ್ಲೌಸ್ ಹಾಕಿಕೊಂಡು ಎಂದಿನಂತೆ ಕ್ರೀಸ್ ಗೆ ಬರುತ್ತಿರುವುದನ್ನು ನೋಡಿ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡರು.

ಇನ್ನೊಂದೆಡೆ ಧೋನಿ ಅಭಿಮಾನಿಗಳ ಅಬ್ಬರ ತಾಳಲಾರದೇ ಕೆಕೆಆರ್ ಆಟಗಾರ ಆಂಡ್ರೆ ರಸೆಲ್ ಕಿವಿ ಮುಚ್ಚಿಕೊಂಡರು. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪಂದ್ಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ರಸೆಲ್ ಬಹುಶಃ ಈ ಮನುಷ್ಯ ಜಗತ್ತಿನ ಅತ್ಯಂತ ಪ್ರಿಯ ಕ್ರಿಕೆಟಿಗ ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಮುಂದಿನ ಸುದ್ದಿ
Show comments