ಐಪಿಎಲ್ 2024: ರಾಜಸ್ಥಾನ್ ರಾಯಲ್ಸ್ ಗೆಲವಿನ ಓಟಕ್ಕೆ ಬ್ರೇಕ್ ಹಾಕಿದ ಗುಜರಾತ್ ಟೈಟನ್ಸ್

Krishnaveni K
ಗುರುವಾರ, 11 ಏಪ್ರಿಲ್ 2024 (08:26 IST)
Photo Courtesy: Twitter
ಜೈಪುರ: ಐಪಿಎಲ್ 2024 ರಲ್ಲಿ ಸೋಲಿಲ್ಲದೇ ಮೆರೆದಾಡುತ್ತಿದ್ದ ರಾಜಸ್ಥಾನ್ ರಾಯಲ್ಸ್ ಇದೀಗ ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್ ಗಳ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ರಾಜಸ್ಥಾನ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡರೂ ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಭರ್ಜರಿ ಆಟವಾಡಿ ತಂಡಕ್ಕೆ ಬೃಹತ್ ಮೊತ್ತ ಕೊಡಿಸಲು ನೆರವಾದರು.

ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ ಸಂಜು ಸ್ಯಾಮ್ಸನ್ 38 ಎಸೆತಗಳಿಂದ 2 ಸಿಕ್ಸರ್ ಸೇರಿದಂತೆ 68 ರನ್ ಮತ್ತು ರಿಯಾನ್ ಪರಾಗ್ 48 ಎಸೆತಗಳಿಂದ 5 ಸಿಕ್ಸರ್ ಸಹಿತ 76 ರನ್ ಗಳಿಸಿದರು. ಇವರಿಬ್ಬರ ಮೂರನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು.

ರಾಜಸ್ಥಾನ್ ಮೊತ್ತ ಬೆನ್ನತ್ತಿದ ಗುಜರಾತ್ ಸ್ವತಃ ನಾಯಕ ಶುಬ್ಮನ್ ಗಿಲ್ ಅರ್ಧಶತಕ ಗಳಿಸಿ ಉತ್ತಮ ಆರಂಭ ನೀಡಿದರು. ಗಿಲ್ 44 ಎಸೆತಗಳಿಂದ 22 ರನ್ ಗಳಿಸಿದರೆ ಅವರಿಗೆ ಸಾಥ್ ನೀಡಿದ ಆರಂಭಿಕ ಸಾಯಿ ಸುದರ್ಶನ್ 35 ರನ್ ಗಳಿಸಿದರು. ಇದಾದ ಬಳಿಕ ಗುಜರಾತ್ ಮಧ್ಯಮ ಕ್ರಮಾಂಕ ಕುಸಿದರೂ ಕೆಳ ಕ್ರಮಾಂಕದಲ್ಲಿ ರಶೀದ್ ಖಾನ್ 11 ಎಸೆತಗಳಿಂದ 24 ಮತ್ತು ರಾಹುಲ್ ತೆವಾತಿಯಾ 11 ಎಸೆತಗಳಿಂದ 22 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಗುಜರಾತ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ ಮದುವೆ ಬಗ್ಗೆ ಕೊನೆಗೂ ಸ್ಪಷ್ಟ ನಿರ್ಧಾರ ಹೇಳಿದ ಸಹೋದರ: ಫ್ಯಾನ್ಸ್ ಶಾಕ್

ಸ್ಮೃತಿ ಮಂಧಾನ, ಪಾಲಾಶ್ ಮುಚ್ಚಲ್ ಹೊಸ ಮದುವೆ ದಿನಾಂಕ ಫಿಕ್ಸ್

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ಮುಂದಿನ ಸುದ್ದಿ
Show comments