Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಇಂದಿನ ಪಂದ್ಯ

IPL 2024

Krishnaveni K

ಲಕ್ನೋ , ಶನಿವಾರ, 30 ಮಾರ್ಚ್ 2024 (09:39 IST)
ಲಕ್ನೋ: ಲಕ್ನೋದಲ್ಲಿ ನಡೆಯಲಿರುವ ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರಸ್ಪರ ಸೆಣಸಾಡಲಿವೆ.

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಗೆ ಇದು ಈ ಋತುವಿನಲ್ಲಿ ಎರಡನೇ ಪಂದ್ಯವಾಗಿದೆ. ಲಕ್ನೋ ಈ ಮೊದಲು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವಾಡಿತ್ತು. ಈ ಪಂದ್ಯವನ್ನು ಸೋತಿದ್ದರಿಂದ ಇದೀಗ ಮೊದಲ ಗೆಲುವು ದಾಖಲಿಸಲು ಕಾದಿದೆ.

ಲಕ್ನೋಗೆ ಕೆಎಲ್ ರಾಹುಲ್, ನಿಕಲಸ್ ಪೂರನ್, ಮಾರ್ಕಸ್ ಸ್ಟಾಯ್ನಿಸ್, ದೇವದತ್ತ ಪಡಿಕ್ಕಲ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆದರೆ ದೇವದತ್ತ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದರು. ಆದರೆ ಬೌಲಿಂಗ್ ನಲ್ಲಿ ನವೀನ್ ಉಲ್ ಹಕ್ ಕಳೆದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನಿಡಿದ್ದರು.

ಇತ್ತ ಶಿಖರ್ ಧವನ್ ನೇತೃತ್ವದ ಪಂಜಾಬ್ ಇದುವರೆಗೆ 2 ಪಂದ್ಯವಾಡಿದ್ದು, ಆ ಪೈಕಿ ಒಂದು ಗೆಲುವು, ಒಂದು ಸೋಲು ಕಂಡಿದೆ. ಕಳೆದ ಪಂದ್ಯದಲ್ಲಿ  ಆರ್ ಸಿಬಿ ವಿರುದ್ಧ ಸೋಲು ಅನುಭವಿಸಿದ್ದ ಪಂಜಾಬ್ ಈಗ ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಸ್ವತಃ ನಾಯಕ ಶಿಖರ್ ಧವನ್ ಫಾರ್ಮ್ ಪ್ರದರ್ಶಿಸಿದ್ದು, ಸ್ಯಾಮ್ ಕ್ಯುರೆನ್, ಕ್ರಿಸ್ ವೋಕ್ಸ್ ರಂತಹ ದಾಂಡಿಗರು ತಂಡದಲ್ಲಿದ್ದಾರೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ನೀವು ಬೇಡ ಎಂದವರಿಗೆ ತಕ್ಕ ಉತ್ತರ ಕೊಟ್ಟ ವಿರಾಟ್ ಕೊಹ್ಲಿ