ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವಿನ ಒತ್ತಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್

Krishnaveni K
ಶುಕ್ರವಾರ, 12 ಏಪ್ರಿಲ್ 2024 (10:24 IST)
ಲಕ್ನೋ: ಐಪಿಎಲ್ 2024 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ರಿಷಬ್ ಪಂತ್ ಪಡೆ ಇಂದು ಗೆಲುವಿನ ಒತ್ತಡದಲ್ಲಿದೆ.

ಐದು ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಗೆದ್ದಿದ್ದು ಕೇವಲ 1 ಪಂದ್ಯ ಮಾತ್ರ. ಇದರಿಂದಾಗಿ ಅಂಕಪಟ್ಟಿಯಲ್ಲಿ ತೀರಾ ಕೆಳಗಿದೆ. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಡೆಲ್ಲಿ ಈಗಲೇ ಎಚ್ಚೆತ್ತುಕೊಂಡು ತಿರುಗಿಬೀಳಬೇಕಿದೆ. ಇಲ್ಲದೇ ಹೋದರೆ ಮುಂದಿನ ಹಾದಿ ಕಷ್ಟವಾಗಲಿದೆ.

ಡೆಲ್ಲಿ ತಂಡದಲ್ಲಿ ಬ್ಯಾಟಿಂಗ್ ಇದುವರೆಗೆ ಹೇಳಿಕೊಳ್ಳುವ ಸಕ್ಸಸ್ ಕಂಡಿಲ್ಲ. ರಿಷಬ್ ಪಂತ್ ಬ್ಯಾಟ್ ನಿಂದ ಅಭಿಮಾನಿಗಳು ಇನ್ನಷ್ಟು ದೊಡ್ಡ ಮೊತ್ತ ನಿರೀಕ್ಷಿಸುತ್ತಿದ್ದಾರೆ. ಕಳೆದ ಎರಡು ಪಂದ್ಯಗಳ ಸತತವಾಗಿ ಸೋಲು ಕಂಡಿರುವ ಡೆಲ್ಲಿ ಈಗ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಬೇಕಾಗಿದೆ.

ಇತ್ತ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಟಾಪ್ 5 ರೊಳಗಿದೆ. ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸತತವಾಗಿ ಕಳೆದ ಮೂರು ಪಂದ್ಯಗಳನ್ನು ಗೆದ್ದುಕೊಂಡು ಅತೀವ ಆತ್ಮವಿಶ್ವಾಸದಲ್ಲಿದೆ.  ಕೆಎಲ್ ರಾಹುಲ್ ಜೊತೆಗೆ ಕ್ವಿಂಟನ್ ಡಿ ಕಾಕ್, ನಿಕಲಸ್ ಪೂರನ್, ಮಾರ್ಕಸ್ ಸ್ಟಾಯ್ನಿಸ್,  ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯರಂತಹ ಟಿ20 ಸ್ಪೆಷಲಿಸ್ಟ್ ಗಳ ಪಡೆಯೇ ರಾಹುಲ್ ಬಳಿಯಿದ್ದಾರೆ. ಹೀಗಾಗಿ ಅಂತಿಮವಾಗಿ ಯಾರು ಮೇಲುಗೈ ಸಾಧಿಸುತ್ತಾರೆ ನೋಡಬೇಕು. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಜೈಸ್ವಾಲ್ ಕೇಕ್ ತಿನ್ನಿಸಲು ಹೋದ್ರೆ ರೋಹಿತ್ ಶರ್ಮಾ ಹೀಗೇ ನಡೆದುಕೊಳ್ಳುವುದಾ, Video

ವಿಕೆಟ್ ಪಡೆದ ಕುಲ್‌ದೀಪ್‌ ಜತೆ ಕಪಲ್ ಡ್ಯಾನ್ಸ್ ಮಾಡಿದ ಕಿಂಗ್ ಕೊಹ್ಲಿ, ವೈರಲ್ ವಿಡಿಯೋ

ಮುಂದಿನ ಸುದ್ದಿ
Show comments