Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಕೆಎಲ್ ರಾಹುಲ್ ಬ್ಯಾಟಿಂಗ್ ನಿಂದ ಸೋತ ಸಿಎಸ್ ಕೆ

KL Rahul

Krishnaveni K

ಲಕ್ನೋ , ಶನಿವಾರ, 20 ಏಪ್ರಿಲ್ 2024 (08:24 IST)
Photo Courtesy: Twitter
ಲಕ್ನೋ: ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಡೆದ ಪಂದ್ಯವನ್ನು ನಾಯಕ ಕೆಎಲ್ ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಸಿಎಸ್ ಕೆ ಅಗ್ರ ಕ್ರಮಾಂಕದ ಬ್ಯಾಟಿಗರು ಕೈ ಕೊಟ್ಟರು. ಆದರೆ ಮಧ‍್ಯಮ ಕ್ರಮಾಂಕದಲ್ಲಿ 40 ಎಸೆತಗಳಿಂದ 57 ರನ್ ಗಳಿಸಿದ ರವೀಂದ್ರ ಜಡೇಜಾ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಲು ನೆರವಾದರು. ಕೊನೆಯಲ್ಲಿ ಧೋನಿ ಎಂದಿನಂತೆ ಬಂದು 9 ಎಸೆತಗಳಿಂದ 2 ಸಿಕ್ಸರ್ ಸಹಿತ 28 ರನ್ ಸಿಡಿಸಿ ಮೊತ್ತ ಉಬ್ಬಲು ನೆರವಾದರು.

ಈ ಮೊತ್ತ ಲಕ್ನೋಗೆ ಸುಲಭ ತುತ್ತು ಎನಿಸುವಂತೆ ಮಾಡಿದ್ದು ಕೆಎಲ್ ರಾಹುಲ್ ಬ್ಯಾಟಿಂಗ್. ಅವರಿಗೆ ಸಾಥ್ ನೀಡಿದ್ದು ಇನ್ನೊಬ್ಬ ಆರಂಭಿಕ ಕ್ವಿಂಟನ್ ಡಿ ಕಾಕ್. ಈ ಪೈಕಿ ಕ್ವಿಂಟನ್ ಕೊಂಚ ತಿಣುಕಾಡಿದರೂ ರಾಹುಲ್ ಗೆ ಉತ್ತಮ ಜೊತೆ ನೀಡಿದ ಮೊದಲ ವಿಕೆಟ್ ಗೆ 134 ರನ್ ಗಳಿಸಲು ನೆರವಾದರು. ಒಟ್ಟು 43 ಎಸೆತ ಎದುರಿಸಿದ ಡಿ ಕಾಕ್ 54 ರನ್ ಗಳಿಸಿ ಔಟಾದರು.

ಆದರೆ ಇನ್ನೊಂದೆಡೆ ಅಬ್ಬರಿಸಿದ ಕೆಎಲ್ ರಾಹುಲ್ 53 ಎಸೆತಗಳಿಂದ 82 ರನ್ ಸಿಡಿಸಿದರು. ಇದರಲ್ಲಿ 3 ಸಿಕ್ಸರ್ 9 ಬೌಂಡರಿ ಸೇರಿತ್ತು. ಇಂದು ಅವರು ಶತಕ ಗಳಿಸಿಯೇ ತೀರುತ್ತಾರೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ದುರಾದೃಷ್ಟವಶಾತ್ ಪತಿರಾಣಗೆ ವಿಕೆಟ್ ಒಪ್ಪಿಸಿದರು.

ಇದುವರೆಗೆ ಎಲ್ಲಾ ಪಂದ್ಯಗಳಲ್ಲಿ ಚೆನ್ನೈ ಬೌಲಿಂಗ್ ಅತ್ಯುತ್ತಮವಾಗಿತ್ತು. ಆದರೆ ಬಹುಶಃ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪರಿಣಾಮಾವೋ ಏನೋ ಎಂಬಂತೆ ಸಿಎಸ್ ಕೆ ಬೌಲರ್ ಗಳು ಲಯ ಕಂಡುಕೊಳ್ಳಲು ವಿಫಲರಾದರು. ಇದರಿಂದಾಗಿಯೇ ಸೋಲು ಅನುಭವಿಸಬೇಕಾಯಿತು. ಅಂತಿಮವಾಗಿ ಲಕ್ನೋ 19 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕೇಕ್ ಮೆತ್ತಿಕೊಂಡಿರುವ ಈ ಕ್ರಿಕೆಟಿಗ ಯಾರು ಹೇಳಿ ನೋಡೋಣ