Webdunia - Bharat's app for daily news and videos

Install App

IPL 2024: ಐಪಿಎಲ್ ನಲ್ಲಿ ಗರಿಷ್ಠ ಸಿಕ್ಸರ್ ಗಳಿಸಿದ ಭಾರತೀಯ ಆಟಗಾರರು

Krishnaveni K
ಶುಕ್ರವಾರ, 22 ಮಾರ್ಚ್ 2024 (11:41 IST)
Photo Courtesy: Twitter
ಮುಂಬೈ: ಐಪಿಎಲ್ ನಂತಹ ಚುಟುಕು ಕ್ರಿಕೆಟ್ ಹೊಡೆಬಡಿಯ ಆಟಕ್ಕೇ ಹೆಸರು ವಾಸಿ. ಇನ್ನೇನು ಐಪಿಎಲ್ 2024 ಆರಂಭವಾಗಲು ಕ್ಷಣಗಣನೆ ಶುರುವಾಗಿದೆ. ಇದೀಗ ಐಪಿಎಲ್ ನಲ್ಲಿ ಗರಿಷ್ಠ ಸಿಕ್ಸರ್ ಗಳಿಸಿದ ಭಾರತೀಯ ಆಟಗಾರರು ಯಾರು ಎಂದು ನೋಡೋಣ.

ರೋಹಿತ್ ಶರ್ಮಾ: ಹಿಟ್ ಮ್ಯಾನ್ ರೋಹಿತ್ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಇದುವರೆಗೆ ಐಪಿಎಲ್ ಆಡಿದ್ದಾರೆ. ಇದುವರೆಗೆ ಐಪಿಎಲ್ ನಲ್ಲಿ 257 ಸಿಕ್ಸರ್ ಸಿಡಿಸಿದ ಅವರು ಮೊದಲ ಸ‍್ಥಾನದಲ್ಲಿದ್ದಾರೆ.
ಎಂ.ಎಸ್.ಧೋನಿ: ಬಿಗ್ ಹಿಟ್ಟರ್ ಧೋನಿ ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪುಣೆ ವಾರಿಯರ್ಸ್ ಪರ ಐಪಿಎಲ್ ಆಡಿದ್ದಾರೆ. ಈ ಪೈಕಿ ಅವರು 239 ಸಿಕ್ಸರ್ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ: ಕ್ರಿಕೆಟ್ ನ ಕಿಂಗ್ ವಿರಾಟ್‍ ಕೊಹ್ಲಿ ಇದುವರೆಗೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿಷ್ಠರಾಗಿದ್ದಾರೆ. ಅವರ ಬ್ಯಾಟ್ ನಿಂದ ಇದುವರೆಗೆ ಸಿಡಿದ ಸಿಕ್ಸರ್ ಗಳ ಸಂಖ್ಯೆ 234.
ಸುರೇಶ್ ರೈನಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳೆಯ ಹುಲಿ ಸುರೇಶ್ ರೈನಾ ಒಟ್ಟು 203 ಸಿಕ್ಸರ್ ಸಿಡಿಸಿದ್ದರು.
ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬಿಗ್ ಹಿಟ್ಟರ್ ಖ್ಯಾತಿ ಹೊಂದಿದ್ದಾರೆ. ಇದುವರೆಗೆ ಅವರು 182 ಸಿಕ್ಸರ್ ಸಿಡಿಸಿದ್ದಾರೆ.
ರಾಬಿನ್ ಉತ್ತಪ್ಪ: ಕರ್ನಾಟಕದ ಕೊಡಗಿನ ವೀರ ರಾಬಿನ್ ಉತ್ತಪ್ಪ ಕೂಡಾ ದೊಡ್ಡ ಹೊಡೆತಗಳಿಗೆ ಹೆಸರು ವಾಸಿ. ಇದುವರೆಗೆ ಆರು ಐಪಿಎಲ್ ಫ್ರಾಂಚೈಸಿಗಳಿಗೆ ಆಡಿರುವ ಉತ್ತಪ್ಪ 182 ಸಿಕ್ಸರ್ ಸಿಡಿಸಿದ್ದಾರೆ.
ಅಂಬಟಿ ರಾಯುಡು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ಅಂಬಟಿ ರಾಯುಡು 173 ಸಿಕ್ಸರ್ ಸಿಡಿಸಿದ್ದರು.
ಕೆಎಲ್ ರಾಹುಲ್: ಕನ್ನಡಿಗ ಕೆಎಲ್ ರಾಹುಲ್ ಆರ್ ಸಿಬಿ, ಪಂಜಾಬ್ ಬಳಿಕ ಈಗ ಲಕ್ನೋ ತಂಡದ ನಾಯಕರಾಗಿದ್ದಾರೆ. ಅವರು ಇದುವರೆಗೆ 168 ಸಿಕ್ಸರ್ ಸಿಡಿಸಿದ್ದಾರೆ.
ಯೂಸುಫ್ ಪಠಾಣ್: ಐಪಿಎಲ್ ಇತಿಹಾಸದಲ್ಲೇ ಬೆಸ್ಟ್ ಬಿಗ್ ಹಿಟ್ಟರ್ ಎಂಬ ಖ್ಯಾತಿಯಲ್ಲಿದ್ದ ಯೂಸುಫ್ ಪಠಾಣ್ ಒಟ್ಟು 158 ಸಿಕ್ಸರ್ ಸಿಡಿಸಿದ್ದರು.
ಯುವರಾಜ್ ಸಿಂಗ್: ಕ್ರಿಕೆಟ್ ನಲ್ಲಿ ಸಿಕ್ಸರ್ ಕಿಂಗ್ ಎಂದೇ ಜನಪ್ರಿಯರಾಗಿರುವ ಯುವರಾಜ್ ಸಿಂಗ್ ಐಪಿಎಲ್ ನಲ್ಲಿ ಒಟ್ಟು 149 ಸಿಕ್ಸರ್ ಸಿಡಿಸಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments