Webdunia - Bharat's app for daily news and videos

Install App

ಐಪಿಎಲ್ 2024: ಸಂಚಲನ ಸೃಷ್ಟಿಸಿದ ಧೋನಿಯ ಹೊಸ ಪೋಸ್ಟ್

Krishnaveni K
ಮಂಗಳವಾರ, 5 ಮಾರ್ಚ್ 2024 (09:22 IST)
Photo Courtesy: Twitter
ಚೆನ್ನೈ: ಐಪಿಎಲ್ 2024 ರ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪೋಸ್ಟ್ ಸಂಚಲನ ಮೂಡಿಸಿದೆ.

ಸಾಮಾನ್ಯವಾಗಿ ಧೋನಿ ಸೋಷಿಯಲ್ ಮೀಡಿಯಾ ಬಳಸುವುದಿಲ್ಲ. ಖಾತೆಯಿದ್ದರೂ ಅವರು ತಮ್ಮ ಖಾತೆಯಿಂದ ಯಾವುದೇ ಪೋಸ್ಟ್ ಮಾಡಲ್ಲ. ಒಮ್ಮೆ ತಮ್ಮ ಫಾರ್ಮ್ ಹೌಸ್ ವಿಚಾರವಾಗಿ ಮತ್ತೊಮ್ಮೆ ನಿವೃತ್ತಿ ವಿಚಾರವಾಗಿ ಹೇಳಲು ಸೋಷಿಯಲ್ ಮೀಡಿಯಾ ಬಳಸಿದ್ದಿದೆ.

ಆದರೆ ಇದೀಗ ಐಪಿಎಲ್ 2024 ಆರಂಭಕ್ಕೆ ಕೆಲವೇ ದಿನ ಬಾಕಿಯಿರುವಾಗ ಧೋನಿ ಫೇಸ್ ಬುಕ್ ನಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ. ತೀರಾ ಮಹತ್ವದ ವಿಚಾರವಿದ್ದರೆ ಮಾತ್ರ ಧೋನಿ ಪೋಸ್ಟ್ ಮಾಡುತ್ತಾರೆ. ಈಗ ಧೋನಿ ಪೋಸ್ಟ್ ಮಾಡಿರುವುದನ್ನು ನೋಡಿ ಅಭಿಮಾನಿಗಳು ಏನಿರಬಹುದು ಎಂದು ಕುತೂಹಲಗೊಳ್ಳುವಂತೆ ಮಾಡಿದೆ.

‘ಹೊಸ ಐಪಿಎಲ್ ಸೀಸನ್ ಗಾಗಿ ಎದಿರು ನೋಡುತ್ತಿದ್ದೇನೆ. ನನ್ನನ್ನು ಹೊಸ ‘ರೋಲ್’ ನಲ್ಲಿ ನೋಡಬಹುದು’ ಎಂದಿದ್ದಾರೆ. ಆ ಹೊಸ ರೋಲ್ ಏನಿರಬಹುದು. ನಿವೃತ್ತಿಯಾಗಿ ತಂಡದ ಮೆಂಟರ್ ಆಗಿರಲಿದ್ದಾರೆಯೇ ಅಥವಾ ಧೋನಿ ಈ ಬಾರಿ ಬೌಲಿಂಗ್ ಕೂಡಾ ಮಾಡ್ತಾರಾ? ಕೀಪಿಂಗ್ ಬೇರೆಯವರ ಕೈಲಿ ಮಾಡಿಸ್ತಾರಾ ಎಂಬಿತ್ಯಾದಿ ಅನುಮಾನಗಳನ್ನು ಅಭಿಮಾನಿಗಳು ಹೊರಹಾಕಿದ್ದಾರೆ. ಆದರೆ ಧೋನಿ ಮಾಡಿರುವ ಈ ಪೋಸ್ಟ್ ನಿಂದಾಗಿ ಅಭಿಮಾನಿಗಳು ಈ ಐಪಿಎಲ್ ಬಗ್ಗೆ ಹೆಚ್ಚು ಕುತೂಹಲದಿಂದ ಎದಿರು ನೋಡುವಂತಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments