Webdunia - Bharat's app for daily news and videos

Install App

ಐಪಿಎಲ್ 2024: ಲಾಂಗ್ ಹೇರ್..ಬಿಗ್ ಸಿಕ್ಸರ್..ಆಹಾ ಧೋನಿ ಎಂದ ಫ್ಯಾನ್ಸ್

Krishnaveni K
ಸೋಮವಾರ, 1 ಏಪ್ರಿಲ್ 2024 (09:56 IST)
Photo Courtesy: Twitter CSK
ವಿಶಾಖಪಟ್ಟಣಂ: ಐಪಿಎಲ್ ನಲ್ಲಿ ಧೋನಿ ಬ್ಯಾಟಿಂಗ್ ನೋಡಬೇಕೆಂಬ ಅಭಿಮಾನಿಗಳ ಬಯಕೆ ಕೊನೆಗೂ ಈಡೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಧೋನಿ ಬ್ಯಾಟಿಂಗ್ ಗಿಳಿದು ಅಭಿಮಾನಿಗಳ ಆಸೆ ಈಡೇರಿಸಿದರು.

ಬರೀ ಬ್ಯಾಟ್ ಹಿಡಿದಿದ್ದು ಮಾತ್ರವಲ್ಲ, ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿ ಧೋನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಒಟ್ಟು 16 ಎಸೆತ ಎದುರಿಸಿದ ಧೋನಿ ಔಟಾಗದೇ 37 ರನ್ ಗಳಿಸಿದರು. ಇದರಲ್ಲಿ ಮೂರು ಬಿಗ್ ಸಿಕ್ಸರ್ ಸೇರಿತ್ತು. ಇದರೊಂದಿಗೆ ಧೋನಿ ಮೂರು ದಾಖಲೆಗಳನ್ನೂ ಮಾಡಿದರು.

ಐಪಿಎಲ್ ನಲ್ಲಿ ಕೊನೆಯ ಓವರ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಧೋನಿ ಮಾಡಿದರು. ಅವರು ಒಟ್ಟು 61 ಸಿಕ್ಸರ್ ಸಿಡಿಸಿದರು. ಜೊತೆಗೆ ಟಿ20 ಕ್ರಿಕೆಟ್ ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿ ಏಷ್ಯಾದ ಮೊದಲ ವಿಕೆಟ್ ಕೀಪರ್ ಬ್ಯಾಟಿಗ ಎನಿಸಿಕೊಂಡರು.  ಅಲ್ಲದೆ ಟಿ20 ಕ್ರಿಕೆಟ್ ನಲ್ಲಿ 300 ಕ್ಯಾಚ್ ಮತ್ತು ಸ್ಟಂಪಿಂಗ್ ಮಾಡಿದ ದಾಖಲೆ ಮಾಡಿದರು.

ಈ ಐಪಿಎಲ್ ನಲ್ಲಿ ಧೋನಿ ತಮ್ಮ ಹಳೆಯ ದಿನಗಳನ್ನು ನೆನಪಿಸುವಂತೆ ಉದ್ದ ಕೂದಲು ಬಿಟ್ಟಿದ್ದಾರೆ. ಉದ್ದ ಕೂದಲು ಬಿಟ್ಟುಕೊಂಡು ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ಗಿಳಿದಿದ್ದು ನೋಡಿ ಅಭಿಮಾನಿಗಳು ಹಳೆಯ ಧೋನಿ ಕಂಡಂತಾಯಿತು ಎಂದಿದ್ದಾರೆ. ಅದಕ್ಕೆ ತಕ್ಕಂತೆ ಹಳೆಯ ಧೋನಿಯಂತೇ ಭರ್ಜರಿ ಹೊಡೆತಗಳ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments