ಐಪಿಎಲ್ 2024: ಅನಿವಾರ್ಯದ ಗೆಲುವಿಗಾಗಿ ಹೋರಾಡಲಿರುವ ಡೆಲ್ಲಿ ಕ್ಯಾಪಿಟಲ್ಸ್ ಗುಜರಾತ್ ಟೈಟನ್ಸ್

Krishnaveni K
ಬುಧವಾರ, 24 ಏಪ್ರಿಲ್ 2024 (11:39 IST)
ದೆಹಲಿ: ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ಪರಸ್ಪರ ಸೆಣಸಾಡಲಿವೆ. ಎರಡೂ ತಂಡಕ್ಕೂ ಈಗ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.

ಕಳೆದ ಪಂದ್ಯದಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಪಡೆ ಹೀನಾಯ ಸೋಲು ಅನುಭವಿಸಿತ್ತು. ಇದರೊಂದಿಗೆ 8 ಪಂದ್ಯಗಳಿಂದ 3 ಗೆಲುವು ಸಂಪಾದಿಸಿರುವ ಡೆಲ್ಲಿ ಅಂಕಪಟ್ಟಿಯಲ್ಲಿ 8 ನೇ ಸ್ಥಾನಕ್ಕೆ ಜಾರಿತ್ತು. ಇದೀಗ ಡೆಲ್ಲಿಗೆ ಪ್ಲೇ ಆಫ್ ಹಂತ ಕ್ಷೀಣವಾಗಿದೆ. ಹಾಗಿದ್ದರೂ ಅದೃಷ್ಟದ ಲೆಕ್ಕಾಚಾರದಲ್ಲಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಬೌಲಿಂಗ್ ಕೈಕೊಟ್ಟಿತ್ತು. ಇದಕ್ಕೆ ಹೈದರಾಬಾದ್ ಅಬ್ಬರದ ಬ್ಯಾಟಿಂಗ್ ಕೂಡಾ ಕಾರಣ ಎಂದರೂ ತಪ್ಪಾಗಲಾರದು. ಆದರೆ ಇದಕ್ಕೆ ಮೊದಲು ನಡೆದ ಪಂದ್ಯದಲ್ಲಿ ಡೆಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿತ್ತು. ಹೀಗಾಗಿ ಮನಸ್ಸಿಟ್ಟು ಆಡಿದರೆ ಡೆಲ್ಲಿ ಸುಲಭದ ತಂಡವೇನಲ್ಲ.

ಇತ್ತ ಗುಜರಾತ್ ಟೈಟನ್ಸ್ ಗೆ ಈ ಐಪಿಎಲ್ ಟೂರ್ನಿ ಏಳು ಬೀಳಿನ ಪಯಣವಾಗಿದೆ. ಆರಂಭದಲ್ಲಿ ಚೆನ್ನಾಗಿ ಆಡಿದ್ದ ಗುಜರಾತ್ ಯಾಕೋ ನಡುವೆ ಮಂಕಾಗಿತ್ತು. ಆದರೆ ಕಳೆದ ಪಂದ್ಯದಲ್ಲಿ ಸಿಕ್ಕ ಗೆಲುವು ಗುಜರಾತ್ ಆತ್ಮವಿಶ್ವಾಸ ಹೆಚ್ಚಿಸಿರಬಹುದು. ಒಟ್ಟು 8 ಪಂದ್ಯಗಳಿಂದ 4 ಗೆಲುವು ಕಂಡಿರುವ ಗುಜರಾತ್ ಗೆ ಈಗ ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಸೋತರೆ ಪ್ಲೇ ಆಫ್ ಕನಸು ಕ್ಷೀಣವಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments