Webdunia - Bharat's app for daily news and videos

Install App

ಐಪಿಎಲ್ 2024: ಯೆಲ್ಲೋ ಫ್ಯಾನ್ಸ್ ನಡುವೆ ಏಕೈಕ ನೀಲಿ ಹುಡುಗ, ಅಭಿಮಾನಿಗೆ ಗಿಫ್ಟ್ ಕೊಡಲು ಮುಂದಾದ ಎಲ್ಎಸ್ ಜಿ

Krishnaveni K
ಬುಧವಾರ, 24 ಏಪ್ರಿಲ್ 2024 (10:32 IST)
ಚೆನ್ನೈ: ಐಪಿಎಲ್ 2024 ರಲ್ಲಿ ಸಿಎಸ್ ಕೆ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದೆ. ನಿನ್ನೆಯ ಪಂದ್ಯದಲ್ಲಿ ಲಕ್ನೋ ಗೆಲ್ಲುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಯಾರೂ ಅಂದುಕೊಳ್ಳದ ರೀತಿಯಲ್ಲಿ ಲಕ್ನೋ ಗೆಲುವು ಸಾಧಿಸಿತು.

ಕೊನೆಯ ಓವರ್ ನಲ್ಲಿ 17 ರನ್ ಬೇಕಾಗಿದ್ದಾಗ ಮಾರ್ಕಸ್ ಸ್ಟಾಯ್ನಿಸ್ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಚೆನ್ನೈ ಮೈದಾನದಲ್ಲಿ ತವರಿನ ಪ್ರೇಕ್ಷಕರ ಮುಂದೆ ಎದುರಾಳಿ ತಂಡಗಳು ರೋಚಕ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ.

ಆದರೆ ಮಾರ್ಕಸ್ ಸ್ಟಾಯ್ನಿಸ್ ತಮ್ಮ ಬಿರುಸಿನ ಶತಕದಿಂದ ನಿನ್ನೆ ಚೆನ್ನೈ ಅಭಿಮಾನಿಗಳನ್ನು ಸ್ತಬ್ಧರಾಗಿಸಿದರು. ಮೈದಾನದ ತುಂಬಾ ಹಳದಿ ಜೆರ್ಸಿ ತೊಟ್ಟು ಚೆನ್ನೈಗೆ ಬೆಂಬಲ ಕೊಡುತ್ತಿದ್ದ ಅಭಿಮಾನಿಗಳು ಕೊನೆಯ ಓವರ್ ನಲ್ಲಿ ಮೌನಕ್ಕೆ ಶರಣಾದರು. ತೀವ್ರ ಬೇಸರದಲ್ಲಿ ಕುಳಿತಿದ್ದ ಹಳದಿ ಜೆರ್ಸಿ ತೊಟ್ಟ ಅಭಿಮಾನಿಗಳ ಗುಂಪಿನ ನಡುವೆ ಏಕೈಕ ನೀಲಿ ಜೆರ್ಸಿ ತೊಟ್ಟ ಅಭಿಮಾನಿಯೊಬ್ಬ ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದ.

ಈ ಅಭಿಮಾನಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಅಭಿಮಾನಿಗೆ ಲಕ್ನೋ ಅಫೀಷಿಯಲ್ ಜೆರ್ಸಿ ಗಿಫ್ಟ್ ಕೊಡಬೇಕು ಎಂದು ನೆಟ್ಟಿಗರು ಅಗ್ರಹಿಸಿದ್ದರು. ಇದು ಲಕ್ನೋ ಫ್ರಾಂಚೈಸಿಯ ಗಮನಕ್ಕೂ ಬಂದಿದೆ. ಅಭಿಮಾನಿಯ ವಿಡಿಯೋಗೆ ಕಾಮೆಂಟ್ ಮಾಡಿರುವ ಲಕ್ನೋ ನಮಗೆ ಈ ಅಭಿಮಾನಿಯನ್ನು ಟ್ಯಾಗ್ ಮಾಡಿ ಕಳುಹಿಸಿ. ಮಿಕ್ಕಿದ್ದನ್ನು ನಮಗೆ ಬಿಡಿ ಎಂದಿದೆ. ಆ ಮೂಲಕ ಚೆನ್ನೈ ಅಪಾರ ಅಭಿಮಾನಿಗಳ ನಡುವೆ ಏಕಾಂಗಿಯಾಗಿ ಸಂಭ್ರಮಿಸಿದ ಈ ಅಭಿಮಾನಿಗೆ ಲಕ್ನೋ ತಂಡದ ಕಡೆಯಿಂದ ಉಡುಗೊರೆ ಸಿಗುವುದು ಪಕ್ಕಾ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಕೊಡಲು ಷರತ್ತು ಹಾಕಿದ ಮೊಹ್ಸಿನ್ ನಖ್ವಿ: ನಿನ್ನತ್ರನೇ ಇಟ್ಕೋ ಅಂತಿದೆ ಭಾರತ

ಸೂರ್ಯಕುಮಾರ್ ಯಾದವ್ ಸೇನೆಗೆ ದೇಣಿಗೆ ಕೊಟ್ಟಾಯ್ತು, ಎಎಪಿ ನಾಯಕ ಯಾವಾಗ ಎಂದು ಪ್ರಶ್ನಿಸಿದ ನೆಟ್ಟಿಗರು

ಟೀಂ ಇಂಡಿಯಾಗೆ ಕಪ್ ಸಿಗಬೇಕಾದ್ರೆ ಮೊಹ್ಸಿನ್ ನಖ್ವಿ ಹೇಳುವ ಈ ಷರತ್ತು ಒಪ್ಪಿಕೊಳ್ಳಬೇಕಂತೆ

ದೇಶದ ಪ್ರಧಾನಿಯೇ ಹೀಗೆ ಹೇಳುವಾಗ.. ಮೋದಿ ಹೇಳಿಕೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ

ಟ್ರೋಫಿ ಕದ್ದೊಯ್ದ ಮೊಹ್ಸಿನ್ ನಖ್ವಿ ಭಾರತದ ವಿರುದ್ಧವೇ ಟ್ವೀಟ್: ಕೆಲವೇ ಕ್ಷಣಗಳಲ್ಲಿ ಎಕ್ಸ್ ಖಾತೆ ಬ್ಯಾನ್

ಮುಂದಿನ ಸುದ್ದಿ
Show comments